ನೆರೆಮನೆಯವಳನ್ನು ಎಳೆದಾಡಿ ಹಲ್ಲೆ ಮಾಡಿದ ಮೊಹಮ್ಮದ್ ಶಮಿ ಮಾಜಿ ಪತ್ನಿ: ವಿಡಿಯೋ ವೈರಲ್
ಇತ್ತೀಚೆಗಷ್ಟೇ ಮೊಹಮ್ಮದ್ ಶಮಿ ಜೊತೆಗೆ ವಿಚ್ಛೇದನದ ಬಳಿಕ ಜೀವನಾಂಶ ವಿಚಾರವಾಗಿ ಕೋರ್ಟ್ ತೀರ್ಪು ನೀಡಿದ್ದರ ಬಗ್ಗೆ ಹಸೀನ್ ಜಹಾನ್ ಅಸಮಾಧಾನ ವ್ಯಕ್ತಪಡಿಸಿ ಸುದ್ದಿಯಾಗಿದ್ದರು. ಕೋರ್ಟ್ 4 ಲಕ್ಷ ರೂ. ಮಾಸಿಕ ಜೀವನಾಂಶ ನೀಡಲು ಆದೇಶಿಸಿತ್ತು. ಆದರೆ ಇದು ಸಾಲಲ್ಲ ಎಂದು ಹಸೀನ್ ಜಹಾನ್ ತಗಾದೆ ತೆಗೆದಿದ್ದರು.
ಇದೀಗ ಶಮಿ ಪತ್ನಿ ಹಸೀನ್ ಜಹಾನ್ ಜಾಗದ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಹಸೀನ್ ಜಹಾನ್ ವಿವಾದಿತ ಜಾಗದಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಈ ಬಗ್ಗೆ ನೆರೆಮನೆಯಾಕೆ ಅಪಸ್ವರವೆತ್ತಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಸೀನ್ ನೆರೆಮನೆಯಾಕೆಯನ್ನು ಎಳೆದಾಡಿ ಹಲ್ಲೆ ನಡೆಸುತ್ತಿದ್ದಾರೆ. ಇದೀಗ ಹಸೀನ್ ಜಹಾನ್ ಮೇಲೆ ಪ್ರಕರಣ ದಾಖಲಿಸಲಾಗಿದೆ.