ಮತ್ತೆ ಪಾಕ್ ಪಡೆಗಳ ಕ್ಯಾತೆ: ಓರ್ವ ಯೋಧ ಹುತಾತ್ಮ
ಅರ್ನಿಯಾ ಪ್ರದೇಶದ ಬಿಎಸ್ಎಫ್ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಸೈನಿಕರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ಓರ್ವ ನಾಗಿರಕನಿಗೆ ಗಾಯವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಇದೀಗ ಗಡಿ ಭದ್ರತಾ ಪಡೆಗಳು ಜಾಗೃತರಾಗಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ ಎಂದು ಹೇಳಲಾಗಿದೆ.