ಮನೆಯಲ್ಲ, ದೇಶದ ಗೋಡೆ ಹಾರಿಸಿತು ಫೇಸ್‌ಬುಕ್ ಪ್ರೀತಿ

ಸೋಮವಾರ, 27 ಫೆಬ್ರವರಿ 2017 (14:15 IST)
ಪ್ರೀತಿ ಎನ್ನುವುದು ಏನನ್ನು ಬೇಕಾದರೂ ಮಾಡಿಸತ್ತೆ ಎನ್ನುತ್ತಾರೆ. ಈತನಿಗಾಗಿದ್ದು ಅದೇ. ಫೇಸ್‌ಬುಕ್ ಪ್ರೀತಿ ಈತನಿಗೆ ದೇಶದ ಗಡಿ ದಾಟಲು ಪ್ರೇರೇಪಿಸಿದೆ. ಆದರೆ ಭಾರತೀಯ ಜವಾನರ ಕೈಯ್ಯಲ್ಲಾತ ಸಿಕ್ಕಿ ಬಿದ್ದಿದ್ದಾನೆ. 
ಹೌದು ಚಂದೀಘಡದ ನಿವಾಸಿ ಸಿಕಂದರಾ ಖಾನ್(30) ಎಂಬಾತ ವಿವಾಹ ಬ್ಯುರೋದಲ್ಲಿ ಕೆಲಸ ಮಾಡುತ್ತಿದ್ದು ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆಕೆ ಪಾಕಿಸ್ತಾನದ ಲಾಹೋರ್ ನಿವಾಸಿಯಾಗಿದ್ದಾಳೆ.
 
2 ವರ್ಷಗಳಿಂದ ಆಕೆಯನ್ನು ಪ್ರೀತಿಸುತ್ತಿದ್ದ ಖಾನ್‌ ಅನೇಕ ದಿನಗಳಿಂದ ಆಕೆಯ ಭೇಟಿಗಾಗಿ ಒದ್ದಾಡುತ್ತಿದ್ದ. ಆದರೆ ಶತ್ರು ದೇಶ ಪಾಕಿಸ್ತಾನಕ್ಕೆ ಹೇಗೆ ಹೋಗುವುದೆಂಬ ಆತಂಕದಲ್ಲಿದ್ದ. ಆದರೆ ಕೊನೆಗೂ ಧೈರ್ಯ ಮಾಡಿದ ಆತ ಗಡಿಯಲ್ಲಿ ನುಸುಳಿ ಪ್ರೇಮಿಯನ್ನು ಸೇರುವ ಯೋಜನೆ ರೂಪಿಸಿದ್ದಾನೆ. ಅಂತೆಯೇ ಪಾಸ್‌ಪೋರ್ಟ್ ಇಲ್ಲದೆ ಭಾರತ- ಪಾಕ್‌ಗೆ ಹೊಂದಿಕೊಂಡಿರುವ ಪಂಜಾಬ್‌ನ ಫಿರೋಜಾಪುರದ ಬಳಿಯಲ್ಲಿ ಗಡಿ ದಾಟಲು ಯತ್ನಿಸಿದ್ದಾನೆ. ಆದರೆ ಬಿಎಸ್‌ಎಫ್ ಜವಾನರ ಕೈಯ್ಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ.
 
ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ಆತನನ್ನು ವಿಚಾರಣೆಗೊಳಪಡಿಸಲಾಗಿ ಪ್ರೇಮದ ವಿಷಯವನ್ನು ಬಾಯ್ಬಿಟ್ಟಿದ್ದಾನೆ.
 
ಸದ್ಯ ಆತ ಪೊಲೀಸರ ವಶದಲ್ಲಿದ್ದು, ಆತನ ವಿರುದ್ಧ ಪಾಸ್‌ಪೋರ್ಟ್ ಕಾಯ್ದೆ 1ರಡಿಯಲ್ಲಿ ಪ್ರಕರಣ ದಾಖಲಾಗಿದೆ. 
 

ವೆಬ್ದುನಿಯಾವನ್ನು ಓದಿ