ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್: ಚೆಸ್ ಪ್ರತಿಭೆ ಪ್ರಜ್ಞಾನಂದ ನೆನೆದ ಸಚಿವೆ

Krishnaveni K

ಗುರುವಾರ, 1 ಫೆಬ್ರವರಿ 2024 (11:21 IST)
Photo Courtesy: Twitter
ನವದೆಹಲಿ: ಕೇಂದ್ರ ಮಧ‍್ಯಂತರ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಸಾಲಿನಲ್ಲಿ ಕ್ರೀಡಾಳುಗಳ ಸಾಧನೆಗಳನ್ನು ವಿಶೇಷವಾಗಿ ಕೊಂಡಾಡಿದ್ದಾರೆ.

ಈ ಸಾಲಿನಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾಳುಗಳ ದಾಖಲೆಯ ಪದಕ ಗಳಿಕೆಯನ್ನು ಹೊಗಳಿದ ನಿರ್ಮಲಾ ಸೀತಾರಾಮನ್, ಇದು ಕ್ರೀಡೆ ಮತ್ತು ಯುವ ಜನ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಯೋಜನೆಗಳಿಗೆ ಸಿಕ್ಕ ಫಲ ಎಂದೂ ಹೇಳಿದ್ದಾರೆ.

ಅದರಲ್ಲೂ ವಿಶೇಷವಾಗಿ ಚೆಸ್ ಪ್ರತಿಭೆ ಆರ್ ಆರ್ ಪ್ರಜ್ಞಾನಂದ ಸಾಧನೆಯನ್ನು ವಿಶೇಷವಾಗಿ ಕೊಂಡಾಡಿದ್ದಾರೆ. ನಮ್ಮ ಬಾಲ ಪ್ರತಿಭೆ ಪ್ರಜ್ಞಾನಂದ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿ ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದರು ಎಂದು ಕೊಂಡಾಡಿದ್ದಾರೆ.

ಇದಲ್ಲದೆ, ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಕೈಗೆತ್ತಿಕೊಂಡಿದ್ದ ಯೋಜನೆಗಳು ಫಲ ಕೊಟ್ಟಿವೆ. ತ್ರಿವಳಿ ತಲಾಖ್ ನಂತಹ ಸುಧಾರಣಾ ಯೋಜನೆಗಳು ಮಹಿಳೆಯರ ಮುಖದಲ್ಲಿ ನೆಮ್ಮದಿ ಮೂಡಿಸಿದೆ ಎಂದಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ರೈತರು, ಬಡವರ ಉದ್ದಾರವೇ ನಮ್ಮ ಗುರಿಯಾಗಲಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ