ಉಪಚುನಾವಣೆ: ದಿನಕರನ್‌ಗೆ ಭರ್ಜರಿ ಗೆಲುವು, ಮಕಾಡೆ ಮಲಗಿದ ಎಐಎಡಿಎಂಕೆ, ಡಿಎಂಕೆ

ಭಾನುವಾರ, 24 ಡಿಸೆಂಬರ್ 2017 (17:54 IST)
ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್‌.ಕೆ.ನಗರ್ ವಿಧಾನಸಭೆ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಎಐಎಡಿಎಂಕೆ ಪಕ್ಷದ ಬಂಡಾಯ ಅಭ್ಯರ್ಥಿ ದಿನಕರನ್ ವಿರುದ್ಧ ತೊಡೆತಟ್ಟಿದ್ದ ಎಐಎಡಿಎಂಕೆ, ಡಿಎಂಕೆ, ಮತ್ತು ಬಿಜೆಪಿ ಹೀನಾಯ ಸೋಲನುಭವಿಸಿವೆ. ದಿನಕರನ್‌ ನೀಡಿದ ಏಟಿಗೆ ವಿಪಕ್ಷಗಳು ತತ್ತರಿಸಿವೆ.
 
ಇಂದು ಬೆಳಿಗ್ಗೆ ಮತಏಣಿಕೆ ಆರಂಭವಾಗುತ್ತಿದ್ದಂತೆ ಮುನ್ನಡೆ ಸಾಧಿಸಿದ್ದ ದಿನಕರನ್ ಕೊನೆಯವರೆಗೂ ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.ದಿನಕರನ್‌ಗೆ 89 ಸಾವಿರ ಮತಗಳು ಬಂದರೆ, ಎಐಎಡಿಎಂಕೆ ಅಭ್ಯರ್ಥಿ ಮಧುಸೂದನ್ ಅವರಿಗೆ 48000 ಮತಗಳು ಬಂದವು.ಡಿಎಂಕೆ ಪಕ್ಷದ ಅಭ್ಯರ್ಥಿ ಗಣೇಶ್ 24 ಸಾವಿರ ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇನ್ನೂ ಬಿಜೆಪಿ ಅಭ್ಯರ್ಥಿಗೆ ಕೇವಲ 1236 ಮತಗಳು ಬಂದವು.
 
ಚುನಾವಣೆ ಫಲಿತಾಂಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದಿನಕರನ್, ಮುಂದಿನ ಮೂರೇ ತಿಂಗಳಲ್ಲಿ ಸಿಎಂ ಪಳನಿಸ್ವಾಮಿ ಸರಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ