ರಾಜಕೀಯ ನಿರ್ಧಾರದ ಮೇಲೆ ಪರಿಣಾಮ ಬೀರಬಹುದು: ನ್ಯಾನ್ಸಿ ಪೆಲೋಸಿ
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೆಲೋಸಿ, ಇಂತಹ ಆಘಾತಕಾರಿ ಬೆಳವಣಿಗೆ ತನ್ನ ರಾಜಕೀಯ ನಿರ್ಧಾರಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿಕೆ ನೀಡಿದ್ದಾರೆ.
ತನ್ನ ಗಟ್ಟಿ ನಿರ್ಧಾರಗಳಿಗೆ ಹೆಸರುವಾಸಿಯಾಗಿರುವ ಪೆಲೋಸಿ ಇತ್ತೀಚೆಗೆ ತಮ್ಮ ಪತಿಯ ಮೇಲೆ ನಡೆದಿರುವ ಹಲ್ಲೆಯ ಬಳಿಕ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿದ್ದು, ರಾಜಕೀಯ ಕ್ಷೇತ್ರದಲ್ಲೂ ಹಿಂದೆ ಸರಿಯುವ ಬಗ್ಗೆ ಚರ್ಚೆಯಾಗುತ್ತಿದೆ.
ತನ್ನ ಪತಿಯ ಮೇಲೆ ದಾಳಿ ನಡೆದ ಬಳಿಕ ಮೊದಲ ಬಾರಿ ಮಾತನಾಡಿರುವ ಪೆಲೋಸಿ, ಕೆಲ ದಿನಗಳ ಹಿಂದೆ ನನ್ನ ಪತಿಯ ಮೇಲೆ ನಡೆದಿರುವ ಹಲ್ಲೆ ಮುಂದೆ ನನ್ನ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತವೆ.