ರಾಹುಲ್ ಗಾಂಧಿ ರಾಷ್ಟ್ರಗೀತೆ ಹಾಡಬಲ್ಲರೇ ?

ಗುರುವಾರ, 8 ಡಿಸೆಂಬರ್ 2016 (16:54 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಷ್ಟ್ರಗೀತೆ ಹಾಡಬಲ್ಲರೇ? ಎಂದು ಬಾಲಿವುಡ್ ನಟ ಅನುಪಮ್ ಖೇರ್ ಪ್ರಶ್ನಿಸಿದ್ದಾರೆ. 

ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ನನಗೆ ರಾಹುಲ್ ಗಾಂಧಿಯವರ ಭಾರತೀಯತೆ ಬಗ್ಗೆ ಸಂದೇಹವಿಲ್ಲ. ಆದರೆ ಅವರು ರಾಷ್ಟ್ರಗೀತೆ ಹಾಡುವುದನ್ನು ನೋಡಲು ಬಯಸುತ್ತೇನೆ. ಅವರಿಗೆ ರಾಷ್ಟ್ರಗೀತೆ ಗೊತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಬಾಲಿವುಡ್‌ನ ಪ್ರಖ್ಯಾತ ನಟ, ಬಿಜೆಪಿ ಬೆಂಬಲಿಗ ಖೇರ್ ಹೇಳಿದ್ದಾರೆ. 
 
ನೋಟು ನಿಷೇಧವನ್ನು ಸಮರ್ಥಿಸಿಕೊಂಡ ಅವರು, ನಿಷೇಧ ಹೇರಿಕೆಗೂ ಮುನ್ನ ರಹಸ್ಯವಾಗಿಡಬೇಕಾಗಿದ್ದುದು ಅಗತ್ಯವಾಗಿತ್ತು ಎಂದಿದ್ದಾರೆ. 
 
ಜತೆಗೆ ನೋಟು ನಿಷೇಧವನ್ನು ವಿರೋಧಿಸಿ ಪ್ರತಿಭಟನೆಗಿಳಿದಿರುವ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಅವರು ಇದು ಪ್ರತಿಪಕ್ಷಗಳ ಅಸಹಿಷ್ಣುತೆಯನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.
 
ಖೇರ್ ಸದಾ ಬಿಜೆಪಿ ಮತ್ತು ಮೋದಿ ಪರ ಧ್ವನಿ ಎತ್ತುವುದರ ಮೂಲಕ ಗುರುತಿಸಿಕೊಳ್ಳುತ್ತಾರೆ.
 

ವೆಬ್ದುನಿಯಾವನ್ನು ಓದಿ