ದೇಶದಲ್ಲಿ ರಾಮರಾಜ್ಯ ಸ್ಥಾಪನೆ ಆದೇಶ ನೀಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

ಶನಿವಾರ, 27 ಆಗಸ್ಟ್ 2016 (17:58 IST)
ದೇಶದಲ್ಲಿ ರಾಮರಾಜ್ಯ ಸ್ಥಾಪಿಸಿ ಎಂದು ಆದೇಶಿಸಲು ಸಾಧ್ಯವಿಲ್ಲ. ಹಲವಾರು ವಿಷಯಗಳು ಗಮನದಲ್ಲಿದ್ದರೂ ಕಾನೂನು ವ್ಯಾಪ್ತಿಯ ಮಿತಿಯಿಂದಾಗಿ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿಕೆ ನೀಡಿದೆ. 
 
ಅರ್ಜಿದಾರರೊಬ್ಬರ ವಿಚಾರಣೆ ನಡೆಸಿದ ಕೋರ್ಟ್, ನಿಮ್ಮ ನಿರ್ದೇಶನಗಳಿಂದ ಪ್ರತಿಯೊಂದು ಸರಿಯಾಗುತ್ತದೆ ಎಂದು ಭಾವಿಸಿದ್ದೀರಾ? ದೇಶದಲ್ಲಿ ಭ್ರಷ್ಟಾಚಾರವಿರಬಾರದು ಎಂದು ಆದೇಶ ನೀಡಿದ ಕೂಡಲೇ ಭ್ರಷ್ಟಾಚಾರ ನಿಲ್ಲುತ್ತದೆಯೇ? ದೇಶದಲ್ಲಿ ರಾಮರಾಜ್ಯ ಸ್ಥಾಪಿಸಿ ಎಂದು ಕೇಂದ್ರ ಸರಕಾರಕ್ಕೆ ಆದೇಶ ನೀಡಲು ಸಾಧ್ಯವೇ? ಎಂದು ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಪ್ರಶ್ನಿಸಿದ್ದಾರೆ. 
 
ರಸ್ತೆ ಮತ್ತು ಫುಟಪಾತ್‌ಗಳಲ್ಲಿ ವಹಿವಾಟುದಾರರು ಕಬಳಿಸಿದ ಸ್ಥಳವನ್ನು ತೆರವುಗೊಳಿಸುವಂತೆ ಆದೇಶ ನೀಡಿ ಎನ್ನುವ ಅರ್ಜಿದಾರರೊಬ್ಬರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ನ್ಯಾಯಾಲಯಕ್ಕೆ ತನ್ನದೇ ಆದ ಮಿತಿಗಳಿವೆ ಎಂದು ಸ್ಪಷ್ಟಪಡಿಸಿತು. 
 
ಎನ್‌ಜಿಓ ಸಂಸ್ಥೆಯೊಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅರ್ಜಿ ವಜಾಗೊಳಿಸದಂತೆ ಮನವಿ ಮಾಡಿ ಸುಪ್ರೀಂಕೋರ್ಟ್ ನಿರ್ದೇಶನ ನೀಡದಿದ್ದರೆ ಮತ್ಯಾರು ನಿರ್ದೇಶನ ನೀಡಲು ಸಾಧ್ಯ ಎಂದು ಕೋರಿತ್ತು.
 
ಕೇವಲ ದೆಹಲಿ ಮಹಾನಗರವಲ್ಲ ದೇಶಾದ್ಯಂತ ನೂರಾರು ನಗರಗಳಲ್ಲಿ ಭೂಗಳ್ಳರು ರಸ್ತೆ ಮತ್ತು ಫುಟ್ಪಾತ್ ಆಕ್ರಮಿಸಿಕೊಂಡಿದ್ದಾರೆ ಎಂದು ಅರ್ಜಿದಾರರು ಸುಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಸಿ ಬೆಳಕು ಚೆಲ್ಲಿದ್ದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ