ಕಾರು ಅಪಘಾತದಲ್ಲಿ ಪ್ರಧಾನಿ ಮೋದಿ ಪತ್ನಿಗೆ ಗಾಯ

ಬುಧವಾರ, 7 ಫೆಬ್ರವರಿ 2018 (12:56 IST)
ರಾಜಸ್ತಾನ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್‌ ಮತ್ತು ಇಬ್ಬರು ಮಹಿಳೆಯರು ಪಯಣಿಸುತ್ತಿದ್ದ ಕಾರು ಇಂದು ಬೆಳಿಗ್ಗೆ ಅಪಘಾತಕ್ಕೀಡಾಗಿದ್ದು, ಜಶೋದಾಬೆನ್‌ ಅವರು ಗಾಯಗೊಂಡಿದ್ದು ಅವರನ್ನು ಚಿತ್ತೋರ್‌ಗಢ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮೋದಿ ಪತ್ನಿ ಜಶೋದಾಬೆನ್‌ ಅವರು ಕೋಟ ಸಮೀಪದ ಬಾರಾನ್‌ ಜಿಲ್ಲೆಯಲ್ಲಿನ ತಮ್ಮ ಬಂಧುಗಳನ್ನು ಭೇಟಿಯಾಗಿ ಗುಜರಾತ್‌ಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತಕ್ಕೆ ಕಾರಣವೇನು ಎಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ. ಬೆಳಗ್ಗೆ 10 ಗಂಟೆ ಸುಮಾರಿಗೆ ಟ್ರೈಲರ್‌ ಟ್ರಕ್‌ಗೆ ಡಿಕ್ಕಿ ಹೊಡೆಯಿತು ಎಂದು ಮೂಲಗಳು ತಿಳಿಸಿವೆ. ಅಪರಿಚಿತ ಟ್ರಕ್‌ ಚಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ