ಚೆನ್ನೈ : ಕೊಯಮತ್ತೂರಿನಲ್ಲಿ ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಚೆನ್ನೈನ 45ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದೆ.
ಸ್ಫೋಟಕ್ಕೆ ಸಂಬಂಧಿಸಿದ ಶಂಕಿತರು ಮತ್ತು ಬೆಂಬಲಿಗರ ಆಸ್ತಿಗಳನ್ನು ಎನ್ಐಎ
ಪರಿಶೀಲನೆ ನಡೆಸುತ್ತಿದ್ದು, ಚೆನ್ನೈನ ಪುದುಪೇಟ್, ಮನ್ನಾಡಿ, ಜಮಾಲಿಯಾ ಮತ್ತು ಪೆರಂಬೂರ್ನಲ್ಲಿ ದಾಳಿ ನಡೆಸಿದೆ.
ಇಷ್ಟೇ ಅಲ್ಲದೇ, ಕೊಯಮತ್ತೂರಿನ ಕೊಟ್ಟೈಮೇಡು, ಉಕ್ಕಡಂ, ಪೊನ್ವಿಜ ನಗರ ಮತ್ತು ರಥಿನಪುರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಅಕ್ಟೋಬರ್ 27 ರಂದು ರಾಷ್ಟ್ರೀಯ ತನಿಖಾ ಸಂಸ್ಥೆಯು ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವ ಜವಾಬ್ದಾರಿ ಹೊತ್ತುಕೊಂಡಿದೆ. ಎನ್ಐಎ ಭಾರತದ ಪ್ರಾಥಮಿಕ ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯಾಗಿದೆ.