ಯುರೋಪಿನ ಉದ್ದದ ಸೇತುವೆ ಧ್ವಂಸ! ಕ್ರಿಮಿಯಾ- ರಷ್ಯಾ ಸಂಪರ್ಕ ಕಡಿತ
ಭಾನುವಾರ, 9 ಅಕ್ಟೋಬರ್ 2022 (08:54 IST)
ಕೀವ್ : ವ್ಲಾದಿಮಿರ್ ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆಯನ್ನು ಧ್ವಂಸ ಮಾಡಲಾಗಿದ್ದು, ಕ್ರಿಮಿಯಾ- ರಷ್ಯಾ ಸಂಪರ್ಕ ಕಡಿತಗೊಂಡಿದೆ.
ತನ್ನ ಮೇಲೆ ದಾಳಿ ಮಾಡುತ್ತಿರುವ ರಷ್ಯಾಗೆ ಉಕ್ರೇನ್ ತಿರುಗೇಟು ನೀಡುತ್ತಲೇ ಇದೆ. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ ಮೂಲಕ ಉಕ್ರೇನ್ನ ಖೇರ್ಸನ್, ಝರ್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 70ನೇ ವರ್ಷಕ್ಕೆ ಕಾಲಿಟ್ಟ ಮರುದಿನವೇ ಈ ಸ್ಫೋಟ ನಡೆದಿದೆ. ಪುಟಿನ್ ಅವರನ್ನು ಅವಮಾನಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಉಕ್ರೇನ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸೇತುವೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಇಂಧನ ಸಾಗಿಸುತ್ತಿದ್ದ ರೈಲೊಂದರ 7 ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಸೇತುವೆಯು ರೈಲುಗಳ ಹಾಗೂ ವಾಹನಗಳ ಸಂಚಾರಕ್ಕೆ ಮಾರ್ಗಗಳನ್ನು ಹೊಂದಿದೆ. ವಾಹನಗಳು ಸಂಚರಿಸುವ ಒಂದು ಮಾರ್ಗ ಕುಸಿದಿದೆ.