ಸುಪ್ರೀಂಕೋರ್ಟ್ ನಿಗದಿತ ಸಮಯ ಉಲ್ಲಂಘಿಸಿ ಪಟಾಕಿ ಹೊಡೆದಿದ್ದಕ್ಕೆ 700 ಮಂದಿ ವಿರುದ್ಧ ಪ್ರಕರಣ
ಗುರುವಾರ, 8 ನವೆಂಬರ್ 2018 (07:45 IST)
ನವದೆಹಲಿ: ವಾಯುಮಾಲಿನ್ಯ ತಡೆಗಟ್ಟಲು ದೀಪಾವಳಿಯಲ್ಲಿ ಪಟಾಕಿ ಹೊಡೆಯಲು ಸುಪ್ರೀಂಕೋರ್ಟ್ ಸಮಯ ನಿಗದಿಪಡಿಸಿದ್ದರೂ ಅದನ್ನು ಉಲ್ಲಂಘಿಸಿದವರ ವಿರುದ್ಧ ತಮಿಳುನಾಡಿನಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೀಪಾವಳಿಯಂದು ಪ್ರತಿನಿತ್ಯ ಸಂಜೆ 8 ಗಂಟೆಯಿಂದ 12 ಗಂಟೆಯೊಳಗೆ ಮಾತ್ರ ಪಟಾಕಿ ಹೊಡೆಯಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಅಲ್ಲದೆ, ಈ ನಿಯಮವನ್ನು ಪಾಲಿಸುವಂತೆ ನೋಡಿಕೊಳ್ಳುವ ಅಧಿಕಾರ ಸ್ಥಳೀಯ ಪೊಲೀಸ್ ಠಾಣೆಗಳದ್ದು ಎಂದು ತೀರ್ಪು ನೀಡಿತ್ತು.
ಸುಪ್ರೀಂಕೋರ್ಟ್ ಆದೇಶವನ್ನು ತಮಿಳುನಾಡು ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಹೀಗಾಗಿ ಪಟಾಕಿ ಹೊಡೆಯುವ ಸಮಯ ನಿಗದಿ ಮಾಡಿತ್ತು. ಆದರೂ ನಿಯಮ ಮೀರಿದ್ದಕ್ಕೆ ಸುಮಾರು 700 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದಿನೇ ದಿನೇ ವಾಯು ಮಾಲಿನ್ಯ ದಟ್ಟವಾಗುತ್ತಿರುವ ಬೆಂಗಳೂರಿನಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದೆ ಜನರು ಹಗಲು ರಾತ್ರಿ ಎನ್ನದೇ ವಿಪರೀತ ಹೊಗೆ ಉಗುಳುವ, ಶಬ್ಧ ಮಾಲಿನ್ಯ ಬೀರುವ ಪಟಾಕಿ ಹೊಡೆಯುತ್ತಿದ್ದಾರೆ. ಇಲ್ಲಿಯೂ ಅಂತಹದ್ದೊಂದು ಕಠಿಣ ಕ್ರಮದ ಅಗತ್ಯವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.