ದೀಪಾವಳಿಯಂದು ಲಕ್ಷ್ಮೀ ಪೂಜೆಯ ಜೊತೆಗೆ ಈ ಕೆಲಸಗಳನ್ನು ಮಾಡಿದರೆ ಎಂದೂ ಆರ್ಥಿಕ ಸಮಸ್ಯೆ ಕಾಡುವುದಿಲ್ಲವಂತೆ

ಬುಧವಾರ, 7 ನವೆಂಬರ್ 2018 (12:40 IST)
ಬೆಂಗಳೂರು : ದೀಪಾವಳಿಯ ದಿನ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಆದರೆ ಅಂದು ಲಕ್ಷ್ಮೀ ಪೂಜೆಯ ಜೊತೆಗೆ ಕೆಲವೊಂದು ಕೆಲಸಗಳನ್ನು ಮಾಡಿದ್ದರೆ ಲಕ್ಷ್ಮೀ ದೇವಿ ಪ್ರಸ್ನಳಾಗುತ್ತಾಳೆ.


ದೀಪಾವಳಿಯ ದಿನ ಮನೆಗೆ ಉಪ್ಪಿನ ಪ್ಯಾಕೆಟ್ ತೆಗೆದುಕೊಂಡು ಬನ್ನಿ. ಇದನ್ನು ಅಡುಗೆ ಮಾಡುವಾಗ ಉಪಯೋಗಿಸಿ. ಹೀಗೆ ಮಾಡುವುದರಿಂದ ವರ್ಷಪೂರ್ತಿ ದೇವಿಯ ಕೃಪೆಗೆ ಪಾತ್ರರಾಗ್ತೀರಾ. ದೀಪಾವಳಿಯ ದಿನ ಉಪ್ಪಿನ ನೀರನ್ನು ಮನೆಯ ಎಲ್ಲ ಮೂಲೆಗೂ ಚಿಮುಕಿಸಿ. ಹಾಗೇ ದೀಪಾವಳಿಯ ರಾತ್ರಿ ಲಕ್ಷ್ಮಿ ದೇವಿಯ ವಿಗ್ರಹದ ಬಳಿ ಕೊತ್ತಂಬರಿ ಬೀಜವನ್ನು ಇಡಿ. ಬೆಳಿಗ್ಗೆ ನೀರಿರುವ ಮಡಿಕೆಗೆ ಕೊತ್ತಂಬರಿ ಬೀಜವನ್ನು ಹಾಕಿ. ಮಾರನೇ ದಿನವೇ ಕೊತ್ತಂಬರಿ ಮೊಳಕೆಯೊಡೆದ್ರೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ ಎನ್ನುವ ನಂಬಿಕೆ ಇದೆ.


ಅಲ್ಲದೇ ದೀಪಾವಳಿಯಂದು ಕೊತ್ತಂಬರಿ, ಅರಿಶಿನ, ಕಮಲದ ಬೀಜ, ಉಪ್ಪನ್ನು ಕೆಂಪು ಬಟ್ಟೆಯಲ್ಲಿ  ಸುತ್ತಿ, ಲಕ್ಷ್ಮಿ ದೇವಿಗೆ ಪೂಜೆ ಮಾಡಿ, ಹಣವಿಡುವ ಸ್ಥಳದಲ್ಲಿ ಇರಿಸಿ. ಇದರಿಂದ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ