ಕರ್ನಾಟಕದ ನಿರ್ಧಾರ ಸುಪ್ರೀಂ ಗಮನಕ್ಕೆ ತರಲು ಮುಂದಾದ ತಮಿಳುನಾಡು

ಶನಿವಾರ, 24 ಸೆಪ್ಟಂಬರ್ 2016 (10:57 IST)
ಕರ್ನಾಟಕದ ವಿಧಾನ ಮಂಡಲದಲ್ಲಿ ನಿನ್ನೆ ಮಾಡಿದ್ದ ನಿರ್ಣಯವನ್ನು ಸುಪ್ರೀಕೋರ್ಟ್ ಗಮನಕ್ಕೆ ತರಲು ತಮಿಳುನಾಡು ನಿರ್ಧರಿಸಿದೆ. 
 
ಕಾವೇರಿ ಜಲಾಶಯಗಳಲ್ಲಿನ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು. ನಮಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ಬಿಡುವುದು ಬೇಡ ಎಂದು ನಿನ್ನೆ ವಿಧಾನ ಮಂಡಲದಲ್ಲಿ ನಿರ್ಧರಿಸಲಾಗಿತ್ತು. ನಿನ್ನೆ ನಡೆದ  ಎಲ್ಲಾ ಬೆಳವಣಿಗೆಗಳನ್ನು ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರಲು ತಮಿಳುನಾಡು ಮುಂದಾಗುತ್ತಿದ್ದು ಸುಪ್ರೀಂಕೋರ್ಟ್ ಆದೇಶದಂತೆ ನಮಗೆ ನೀರು ಬಿಡುತ್ತಿಲ್ಲ ಎಂಬುದನ್ನು ಲಿಖಿತ ಅರ್ಜಿಯ ಮೂಲಕ ಕೋರ್ಟ್‌ಗೆ ಮನವರಿಕೆ ಮಾಡಲಿದೆ.
 
ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗುತ್ತಾ ಎಂಬುದು ಸಂಜೆಯೊಳಗೆ ತಿಳಿದು ಬರಲಿದೆ. 
 
ನಿನ್ನೆಯ ನಿರ್ಧಾರ ರಾಜ್ಯಕ್ಕೆ ಮುಳುವಾಗಲಿದೆಯೇ ಎಂಬುದು 27 ನೇ ತಾರೀಖಿಗೆ ನಡೆಯಲಿರುವ ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ  ಸ್ಪಷ್ಟವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ