ಕಾವೇರಿ ವಿವಾದ: ತಮಿಳುನಾಡಲ್ಲಿ 48 ಗಂಟೆ ರೈಲ್ ರೋಖೋ ಧರಣಿ

ಸೋಮವಾರ, 17 ಅಕ್ಟೋಬರ್ 2016 (15:11 IST)
ತಮಿಳುನಾಡು ಮತ್ತು ಕರ್ನಾಟಕದ ನಡುವೆ ನಡೆಯುತ್ತಿರುವ ನೀರಿನ ವಿವಾದ ಇತ್ಯರ್ಥಗೊಳಿಸಲು ಕಾವೇರಿ ಆಡಳಿತ ಮಂಡಳಿಯನ್ನು ಸ್ಥಾಪಿಸುವಲ್ಲಿ ಕೇಂದ್ರ ಮಧ್ಯಪ್ರವೇಶಿಸಬೇಕೆಂದು ರೈತ ಫೆಡರೇಷನ್ 'ರೈಲ್ ರೋಖೋ' ಚಳುವಳಿಗೆ ಮುಂದಾಗಿದ್ದು, ವಿರೋಧ ಪಕ್ಷ ಡಿಎಂಕೆ ಕೂಡ ಅದಕ್ಕೆ ಸಾಥ್ ನೀಡಿದೆ.
ಪೆರಂಬೂರ್‌ನಲ್ಲಿ ಧರಣಿಯ ನೇತೃತ್ವ ವಹಿಸಿದ್ದ ಡಿಎಂಕೆ ಖಜಾಂಚಿ ಮತ್ತು ವಿರೋಧ ಪಕ್ಷದ ನಾಯಕ ಎಂ.ಕೆ ಸ್ಟಾಲಿನ್ ಅವರನ್ನು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.  
 
ಡಿಎಂಕೆಯ ಸಾವಿರಾರು ಕಾರ್ಯಕರ್ತರು, ಎಡ ಪಕ್ಷ ಮತ್ತು ಎಂಡಿಎಂಕೆ ಕಾರ್ಯಕರ್ತರು  ತಂಜಾವೂರ್ ಮತ್ತು ಕುಡ್ಡಲೋರ್‌ಗಳಲ್ಲಿ ಧರಣಿ ನಡೆಸಿದ್ದು ಪೊಲೀಸರು ಅವರನ್ನು ಬಂಧಿಸಿದ್ದಾರೆ. 
 
ಚೆನ್ನೈನಲ್ಲಿ ರೈಲು ನಿಲ್ದಾಣಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳ ಎದುರು ಧರಣಿಯನ್ನು ನಡೆಸಲಾಯಿತು. 
 
"ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಬಿಡಲು ಆದೇಶಿಸಿರುವ ನೀರಿನ ಪ್ರಮಾಣ ಅಸಮರ್ಪಕ ಆಗಿದೆ. ಅಲ್ಲದೆ, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕಾವೇರಿ ನೀರಿನ ಮೇಲೆ ರಾಜಕೀಯ ಆಟವನ್ನಾಡುತ್ತಿದೆ," ಎಂದು  ಡಿಎಂಕೆ ನಾಯಕ ಕಿಡಿಕಾರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ