ನಾಳೆ ಕಾವೇರಿ ನೀರಿನ ತೀರ್ಪು– ಸುಪ್ರೀಂಕೋರ್ಟಿನತ್ತ ಎಲ್ಲರ ಚಿತ್ತ

ಗುರುವಾರ, 15 ಫೆಬ್ರವರಿ 2018 (15:31 IST)
ಕಾವೇರಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಾಳೆ ತೀರ್ಪು ನೀಡಲಿದ್ದು, ರಾಜ್ಯಕ್ಕೆ ನ್ಯಾಯ ಸಿಗುವುದೋ ಅಥವಾ ಅನ್ಯಾಯವಾಗುವುದೋ ಎಂಬ ಕಾರಣಕ್ಕೆ ಎಲ್ಲರ ಚಿತ್ತಕ್ಕೆ ಸುಪ್ರೀಂಕೋರ್ಟಿನತ್ತ ಹರಿದಿದೆ.
 
ದೀರ್ಘ ಕಾಲದಿಂದಲೂ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಪ್ರಕರಣದ ತೀರ್ಪು ನಾಳೆ ಹೊರಬೀಳಲಿದ್ದು, ನಾಳಿನ ಫಲಿತಾಂಶ ಕುತೂಹಲ ಕೆರಳಿಸಿದೆ.
 
2007ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ಅಂತಿಮ ತೀರ್ಪು ಪ್ರಕಟಿಸಿತ್ತು. ಅದರ ಪ್ರಕಾರ ಕರ್ನಾಟಕ ರಾಜ್ಯಕ್ಕೆ ವಾರ್ಷಿಕ 270 ಅಡಿ ಟಿಎಂಸಿ, ತಮಿಳುನಾಡುಗೆ 419 ಹಾಗೂ ಕೇರಳಕ್ಕೆ 30 ಟಿಎಂಸಿ ನೀರು ಹಂಚಿಕೆ ಆದೇಶವನ್ನು ಘೋಷಿಸಿತ್ತು. ಈ ಆದೇಶದ ವಿರುದ್ಧ ಮೂರು ರಾಜ್ಯಗಳು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ