ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಭರ್ಜರಿ ಸರ್ಜರಿ

ಗುರುವಾರ, 16 ಮಾರ್ಚ್ 2017 (11:01 IST)
ನವದೆಹಲಿ:  ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರದ ಸಂಪುಟಕ್ಕೆ ಪ್ರಧಾನಿ ಮೋದಿ ಭಾರೀ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಸಂಸತ್ತು ಅಧಿವೇಶನ ಮುಗಿದ ಮೇಲೆ ಈ ಬದಲಾವಣೆಯಾಗಲಿದೆ.

 
ಬಹುಶಃ ಏಪ್ರಿಲ್ ಎರಡನೇ ವಾರದಲ್ಲಿ ಸಂಪುಟದಲ್ಲಿ ಹಲವು ಖಾತೆಗಳ ಬದಲಾವಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಸಚಿವರ ಖಾತೆ ಬದಲಾವಣೆ, ಖಾಲಿಯಿರುವ ಸಚಿವ ಸ್ಥಾನಕ್ಕೆ ಹೊಸಬರನ್ನು ನೇಮಿಸುವುದೂ ಸೇರಿದಂತೆ ಮಹತ್ವದ ಬದಲಾವಣೆಯಾಗಲಿದೆ.

ಮನೋಹರ್ ಪರಿಕ್ಕರ್ ರಿಂದ ತೆರವಾದ ರಕ್ಷಣಾ ಸಚಿವಾಲಯದ ಜವಾಬ್ದಾರಿಯನ್ನು ಈಗ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಭಾಯಿಸುತ್ತಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್  ಕೇಂದ್ರ ಸರ್ಕಾರಕ್ಕೆ ಬಡ್ತಿ ಪಡೆಯಲಿದ್ದಾರೆಂಬ ಸುದ್ದಿಯಿದೆ.   ಈ ಎಲ್ಲಾ ಗೊಂದಲಗಳಿಗೆ ಸಂಪುಟ ಬದಲಾವಣೆಯಿಂದ ಉತ್ತರ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ