ವಯನಾಡು ಸಂತ್ರಸ್ತರ ಸಾಲ ಮನ್ನಾ ಮಾಡದೆ ಕೇಂದ್ರ ದ್ರೋಹ ಬಗೆಯುತ್ತಿದೆ: ಪ್ರಿಯಾಂಕಾ ಗಾಂಧಿ

Sampriya

ಗುರುವಾರ, 10 ಏಪ್ರಿಲ್ 2025 (15:54 IST)
Photo Courtesy X
ವಯನಾಡು:  ಕಳೆದ ವರ್ಷ ಜುಲೈನಲ್ಲಿ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಹಾನಿಗೊಳಗಾದ ಜನರ ಸಾಲವನ್ನು ಮನ್ನಾ ಮಾಡದೆ ಕೇಂದ್ರ ಸರ್ಕಾರ ದ್ರೋಹ ಬಗೆಯುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ಹೊರಹಾಕಿದರು.

ವಯನಾಡಿನ ಸಂಸದೆಯೂ ಆಗಿರುವ ಪ್ರಿಯಾಂಕಾ, ವಯನಾಡಿನ ಭೂಕುಸಿತ ಸಂತ್ರಸ್ತರು ಮನೆಗಳು, ಭೂಮಿ, ಜೀವನೋಪಾಯ - ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದರೂ ಕೇಂದ್ರ ಸರ್ಕಾರ ಸಾಲವನ್ನು ಮನ್ನಾ ಮಾಡುಲು ನಿರಾಕರಿಸುತ್ತಿದೆ. ಅವರು ಕೇವಲ ಸಾಲ ಮರು ನಿಗದಿಪಡಿಸುವಿಕೆ ಮತ್ತು ಪುನರ್ರಚನೆಯನ್ನು ಮಾಡುತ್ತಿದ್ದಾರೆ. ಇದು ಪರಿಹಾರವಲ್ಲ. ಇದು ದ್ರೋಹ ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕೇಂದ್ರದ ಈ ನಡೆಯನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಮತ್ತು ವಯನಾಡಿನ ನಮ್ಮ ಸಹೋದರ ಸಹೋದರಿಯರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. ಅವರ ನೋವನ್ನು ನಿರ್ಲಕ್ಷಿಸಲಾಗುವುದಿಲ್ಲ. ನ್ಯಾಯ ದೊರೆಯುವವರೆಗೆ ನಾವು ಪ್ರತಿಯೊಂದು ವೇದಿಕೆಯಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ