ಜೈಲಿನಲ್ಲೇ ಕೋಟಿ ಕೋಟಿ ದುಡಿಯುತ್ತಿರುವ ಕೈದಿಗಳು..!

ಮಂಗಳವಾರ, 6 ಜೂನ್ 2017 (13:12 IST)
ಶಿಕ್ಷೆಗೀಡಾದ ಕೈದಿಗಳಿಗೆ ಜೈಲಿನಲ್ಲೇ ಉದ್ಯೋಗ ನೀಡಲಾಗುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ತೆಲಂಗಾಣದ ಚಂಚಲಗುಡಾ ಜೈಲಿನ ಕೈದಿಗಳು ಪೆಟ್ರೋಲ್ ಬಂಕ್ ನಡೆಸುತ್ತಿದ್ದು, ಇದರಿಂದ ವರ್ಷಕ್ಕೆ ಬರೋಬ್ಬರಿ 4 ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ. ಈ ಆದಾಯವನ್ನ ಜೈಲಿನ ಅಭಿವೃದ್ಧಿಗೆ ಬಳಸಲಾಗುತ್ತಿದೆ.
 

ಚಂಚಲಗುಡಾದಲ್ಲಿರುವ ಈ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಆದಾಯದಲ್ಲಿ ಇಡೀ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿರುವ ಪೆಟ್ರೋಲ್ ಬಂಕ್`ಗಳಲ್ಲೇ ಅತಿ ಹೆಚ್ಚು ಆದಾಯ ಗಳಿಸಿರುವ ಬಂಕ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಲ್ಲಿ ವಾರ್ಷಿಕ 100-120 ಕೋಟಿ ರೂ. ವಹಿವಾಟು ನಡೆಯುತ್ತೆ.

ಜೀವಾವಧಿ ಶಿಕ್ಷೆಗೊಳಗಾಗಿರುವ 45 ಕೈದಿಗಳು 3 ಪಾಳಿಗಳಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 12 ಸಾವಿರ ಸಂಬಳ ಪಡೆಯುತ್ತಿದ್ದಾರೆ. ಕೈದಿಗಳ ಸನ್ನಡತೆ, ಪೆರೋಲ್ ಪಡೆದಾಗ ಸಮಯಕ್ಕೆ ಸರಿಯಾಗಿ ಜೈಲಿಗೆ ವಾಪಸ್ಸಾದ ದಾಖಲೆ, ಕುಟುಂಬದ ಹಿನ್ನೆಲೆಗಳ ಆಧಾರದ ಮೇಲೆ ಕೈದಿಗಳನ್ನ ಇಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಲಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ