ಆಂಧ್ರಪ್ರದೇಶ ಚಂದ್ರಬಾಬು ನಾಯ್ಡು ತೆಕ್ಕೆಗೆ, ಕೇಂದ್ರದಲ್ಲೂ ನಾಯ್ಡು ಕಿಂಗ್ ಮೇಕರ್

Krishnaveni K

ಮಂಗಳವಾರ, 4 ಜೂನ್ 2024 (13:54 IST)
Photo Credit: X
ಹೈದರಾಬಾದ್: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಚಂದ್ರ ಬಾಬು ನಾಯ್ಡು ನೇತೃತ್ವದ ಟಿಡಿಪಿ ಬಹುಮತ ಸಾಧಿಸಿದ್ದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆಂಧ್ರಪ್ರದೇಶ ವಿಧಾನಸಭೆ ಮಾತ್ರವಲ್ಲ, ಲೋಕಸಭೆ ಚುನಾವಣೆಯಲ್ಲೂ ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಆಗಿದ್ದಾರೆ.

ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬರಬೇಕೆಂದರೆ ಸದ್ಯದ ಪರಿಸ್ಥಿತಿ ಗಮನಿಸುವಾಗ ಟಿಡಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಬೆಂಬಲ ಬೇಕೇ ಬೇಕು. ಹೀಗಾಗಿ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಈಗ ಕಿಂಗ್ ಮೇಕರ್ ಆಗಿದ್ದಾರೆ.

ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಒಂದು ವೇಳೆ ತಮ್ಮ ನಿಷ್ಠೆ ಬದಲಿಸಿ ಇಂಡಿಯಾ ಒಕ್ಕೂಟ ಬೆಂಬಲಿಸಿದರೆ ಎನ್ ಡಿಎ ಅಧಿಕಾರಕ್ಕೆ ಬರಲಾಗದು. ಹೀಗಾಗಿ ಈಗ ಈ ಇಬ್ಬರೂ ನಾಯಕರು ಕಿಂಗ್ ಮೇಕರ್ ಆಗಿದ್ದಾರೆ.

ಇನ್ನೊಂದೆಡೆ ಇಂಡಿಯಾ ಒಕ್ಕೂಟ ಈಗಾಗಲೇ ನಿತೀಶ್ ಕುಮಾರ್ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ನಿತೀಶ್ ಕುಮಾರ್ ರನ್ನು ಸೆಳೆಯಲು ದೊಡ್ಡ ಆಫರ್ ನ್ನೇ ನೀಡಬಹುದು. ಹೀಗಾಗಿ ಈಗ ಒಂದು ರೀತಿಯ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ