ನವದೆಹಲಿ: ಒಂದೆಡೆ ಲೋಕಸಭೆ ಚುನಾವಣೆ 2024 ರ ಮತ ಎಣಿಕೆ ಕಾರ್ಯ ಜಾರಿಯಲ್ಲಿದ್ದರೆ ಇನ್ನೊಂದೆಡೆ ದೆಹಲಿಯಲ್ಲಿ ನೂತನ ಪ್ರಧಾನ ಮಂತ್ರಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆಗಳು ಆರಂಭವಾಗಿದೆ.
ಸದ್ಯದ ಪರಿಸ್ಥಿತಿ ಪ್ರಕಾರ ಯಾವ ಸರ್ಕಾರ ಜಾರಿಗೆ ಬರಬಹುದು ಎಂದು ಹೇಳಲೂ ಆಗದ ಸ್ಥಿತಿಯಲ್ಲಿದೆ. ಆಡಳಿತಾರೂಢ ಎನ್ ಡಿಎ ಮುನ್ನಡೆಯಲ್ಲಿದ್ದರೂ ವಿಪಕ್ಷ ಇಂಡಿಯಾ ಒಕ್ಕೂಟದಿಂದ ಹೆಚ್ಚು ಅಂತರದಲ್ಲಿಲ್ಲ ಎನ್ನುವುದು ಗಮನಾರ್ಹ ಅಂಶ. ಬಿಜೆಪಿ ಏಕಾಂಗಿಯಾಗಿ ಬಹುತಮ ಸಾಧಿಸುವುದಂತೂ ಸಾಧ್ಯವಿಲ್ಲ.
ಹೀಗಾಗಿ ಯಾರು ಬಹುಮತ ಸಾಧಿಸಲಿದ್ದಾರೆ ಎನ್ನುವುದು ಕುತೂಹಲಕಾರಿಯಾಗಿ ಉಳಿದಿದೆ. ಈ ನಡುವೆ ದೆಹಲಿಯಲ್ಲಿ ಪ್ರಧಾನ ಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬೇಕಾದ ಭದ್ರತಾ ಸಿದ್ಧತೆಗಳು ಆರಂಭವಾಗಿದೆ.
ಇಂದು ಫಲಿತಾಂಶ ಪ್ರಕಟವಾಗಲಿದ್ದು, ಈ ವಾರಂತ್ಯಕ್ಕೆ ನೂತನ ಪ್ರಧಾನ ಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇದಕ್ಕಾಗಿ ದೆಹಲಿ ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳು ಸಿದ್ಧತೆ ಆರಂಭಿಸಿವೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಷ್ಟ್ರಪತಿ ಭವನದಲ್ಲಿ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ನಡೆದಿದೆ.