ಸಿಜೆಐ ಹುದ್ದೆಗೆ ಚಂದ್ರಚೂಡ್ ಹೆಸರು ಶಿಫಾರಸ್ಸು
ಸಿಜೆಐ ಲಲಿತ್ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, 2 ವರ್ಷಗಳ ಸುದೀರ್ಘ ಅಧಿಕಾರವಧಿಯನ್ನು ಹೊಂದಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
ಇಂದು ನ್ಯಾಯಾಧೀಶರ ಲಾಂಜ್ನಲ್ಲಿ ಸುಪ್ರೀಂ ಕೋರ್ಟ್ನ ಎಲ್ಲಾ ನ್ಯಾಯಾಧೀಶರು ಹಾಜರಿರಬೇಕು ಎಂದು ಹಾಲಿ ಸಿಜೆಐ ಮನವಿ ಮಾಡಿದ್ದರು. ಈ ವೇಳೆ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಮುಂದಿನ ಸಿಜೆಐ ಆಗಿ ಶಿಫಾರಸು ಮಾಡುವ ಬಗ್ಗೆ ಪ್ರಸ್ತಾಪಿಸಲಾಯಿತು.