ಮಹಿಳೆಯರು ಸುರಕ್ಷಿತ ವೈದ್ಯಕೀಯ ಗರ್ಭಪಾತಕ್ಕೆ ಅರ್ಹರು : ಸುಪ್ರೀಂ
ಶುಕ್ರವಾರ, 30 ಸೆಪ್ಟಂಬರ್ 2022 (09:09 IST)
ನವದೆಹಲಿ : ದೇಶದಲ್ಲಿ ಮಹಿಳೆಯರ ಗರ್ಭಪಾತದ ಕುರಿತಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿವಾಹಿತರು ಅಥವಾ ಅವಿವಾಹಿತ ಎಲ್ಲಾ ವರ್ಗದ ಮಹಿಳೆಯರೂ ಸುರಕ್ಷಿತವಾದ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿದೆ.
ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಗರ್ಭದಾರಣೆ ಕುರಿತಾಗಿ ಸಲ್ಲಿಸಿದ್ದ ಅರ್ಜಿ ಒಂದರ ವಿಚಾರಣೆ ವೇಳೆ ಈ ಮಹತ್ವದ ತೀರ್ಪನ್ನು ನೀಡಿದೆ.
ಮದುವೆಯಾಗದ ಮಹಿಳೆಯರು ಸುರಕ್ಷಿತ ಮತ್ತು ವೈದ್ಯಕೀಯವಾಗಿ ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಲು ಕಾನೂನಿನಡಿಯಲ್ಲಿ ಹಕ್ಕು ಹೊಂದಿದ್ದಾರೆ. ಮದುವೆ ಆದವರು, ಮತ್ತು ಆಗದವರು ಎಂಬ ಬೇಧವನ್ನು ಗರ್ಭಪಾತ ಕಾನೂನಿನಲ್ಲಿ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
ಬಲವಂತದ ಗರ್ಭಧಾರಣೆಯನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಬೇಕು. ಸಂತ್ರಸ್ಥೆ ಗರ್ಭಪಾತಕ್ಕೆ ಇಚ್ಚಿಸಿದರೆ ಅದನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಿ ಅವಕಾಶ ನೀಡಬೇಕು.