ಕೇರಳ: ಮುಖ್ಯಮಂತ್ರಿ ಓಮನ್ ಚಾಂಡಿ ರಾಜೀನಾಮೆ

ಶುಕ್ರವಾರ, 20 ಮೇ 2016 (13:10 IST)
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಓಮನ್ ಚಾಂಡಿ ರಾಜೀನಾಮೆ ಸಲ್ಲಿಸಿದ್ದಾರೆ. 
 
ಇಂದು ಬೆಳಿಗ್ಗೆ 1030 ಗಂಟೆಗೆ ರಾಜ್ಯಪಾಲರ ಭವನಕ್ಕೆ ತೆರಳಿದ ಸಿಎಂ ಚಾಂಡಿ, ರಾಜ್ಯಪಾಲ ಪಿ.ಸದಾಶಿವನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
 
ಮುಂದಿನ ವಾರ ಯುಡಿಎಫ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆ ಸೋಲಿನ ಕಾರಣಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. 
 
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಡಿಎಫ್‌ ಪಕ್ಷ 91 ಸೀಟುಗಳಲ್ಲಿ ಜಯಗಳಿಸಿದ್ದರೆ, ಯುಡಿಎಫ್‌ ಕೇವಲ 47 ಸೀಟುಗಳಲ್ಲಿ ಜಯಗಳಿಸಿ ಹೀನಾಯ ಸೋಲನುಭವಿಸಿದೆ.
 
ಯುಡಿಎ ಪಕ್ಷದ ಸೋಲಿಗೆ ಪ್ರತಿಯೊಬ್ಬ ಮುಖಂಡರು ಕಾರಣರಾಗಿದ್ದರೂ ಯುಡಿಎಫ್ ಮುಖ್ಯಸ್ಥನಾಗಿ ನಾನು ಹೆಚ್ಚಿನ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಚಾಂಡಿ ತಿಳಿಸಿದ್ದಾರೆ. 
 
ವಿಪಕ್ಷ ನಾಯಕರು ಸಮ್ಮತಿ ಸೂಚಿಸುತ್ತಿಲ್ಲ ಎನ್ನುವ ಮಾಧ್ಯಮಗಳ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
 
ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಸಚಿವಾಲಯದಲ್ಲಿನ ಕಚೇರಿಯ ಸಿಬ್ಬಂದಿಗಳು ಮತ್ತು ಉದ್ಯೋಗಿಗಳನ್ನು ಭೇಟಿ ಮಾಡಲು ತೆರಳುತ್ತಿರುವುದಾಗಿ ಮುಖ್ಯಮಂತ್ರಿ ಓಮನ್ ಚಾಂಡಿ ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ