ಕ್ಲಿನ್ ಗಂಗಾ: ಬಾಲಕ ಬರೆದ ಪತ್ರಕ್ಕೆ, ಪ್ರಧಾನಿ ಏನಂದ್ರು?

ಮಂಗಳವಾರ, 25 ಅಕ್ಟೋಬರ್ 2016 (13:35 IST)

ಚೆನ್ನೈ: ಶುದ್ಧ ಗಂಗಾ ಕೇಂದ್ರ ಸರಕಾರದ ಕನಸಿನ ಯೋಜನೆ.. ಇದೀಗ ಇದೇ ಶುದ್ಧ ಗಂಗಾ ಕಾರ್ಯಕ್ಕೆ ದಕ್ಷಿಣ ಭಾರತದಿಂದ ಪ್ರಧಾನಿಗೆ ಪತ್ರವೊಂದು ರವಾನೆಯಾಗಿದೆ. ಹೌದು ಈಗ ತಾನೆ ನಾಲ್ಕನೇ ತರಗತಿ ಓದುತ್ತಿರುವ ಶಶಾಂಕ ಎಂಬಾತ ಕ್ಲೀನ್ ಗಂಗಾ ಸಲುವಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾನೆ.
 


 

ಶ್ರೀ ಸರಸ್ವತಿ ಪ್ರಾರ್ಥನಾ ಎಂಬ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ  ಶಶಾಂಕ್, ಬಹುಮಾನ ರೂಪದಲ್ಲಿ ಬಂದಿದ್ದ 1000 ರೂಪಾಯಿ ಹಾಗೂ ತಾನೇ ಎ4 ಸೈಜ್ನ ಬಿಳಿ ಹಾಳೆಯಲ್ಲಿ ಪತ್ರ ಬರೆದಿದ್ದಾನೆ. ಮೊದಲಿಂದಲೂ ಧಾರ್ಮಿಕತೆಯಲ್ಲಿ ಅಪಾರ ಆಸಕ್ತಿ ಇರುವ ಶಶಾಂಕ ಚಿಕ್ಕ ವಯಸ್ಸಿನಲ್ಲಿಯೇ ಹಲವು ಸಾಧನೆ ಮಾಡಿದ್ದಾನೆ.

 

ಇಲ್ಲಿನ ಆಡಂಬಕಂ ಶಾಲೆಯಲ್ಲಿ ಓದುತ್ತಿರುವ ಶಶಾಂಕ ಪಠ್ಯಗಳಲ್ಲಿ ಬರುವ ನದಿಗಳ ಬಗ್ಗೆ ಶಿಕ್ಷಕರ ಬಳಿ ಮಾಹಿತಿ ಪಡೆಯುತ್ತಿದ್ದ. ಇದೇ ವೇಳೆ ಕ್ಲಿನ್ ಗಂಗಾ ಯೋಜನೆ ಬಗ್ಗೆ ತಿಳಿದುಕೊಂಡ ಶಶಾಂಕ ಪತ್ರದ ಮೂಲಕ ತನ್ನ ಅಭಿಪ್ರಾಯ ತಿಳಿಸಿದ್ದಾನೆ.

ಇದ್ದಕ್ಕೆ ಪಿಎಂ ಕಾರ್ಯದರ್ಶಿ ಪಿಕೆ ಬಾಲಿ ಬಾಲಕನ ನೀಟಾದ ಪತ್ರಕ್ಕೆ ಅದೇ ರೀತಿಯ ಮೆಚ್ಚುಗೆಯ ಪತ್ರ ರವಾನಿಸಿದ್ದಾರೆ. ಪ್ರಧಾನಿಗಳೂ ನಿಮ್ಮ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಕಳೆದ ಕೆಲ ವರ್ಷದಿಂದ ಗಂಗಾ ನದಿ ತನ್ನ ಹಳೆಯ ವೈಭೋಗವನ್ನು ಮಾಲಿನ್ಯದಿಂದ ಕಳೆದುಕೊಳ್ಳುತ್ತಿತ್ತು. ಕೈಗಾರಿಕರಣದಿಂದ ನದಿ ಮಲೀನವಾಗಿತ್ತು. ಇದೆಲ್ಲದಕ್ಕೂ ಮುಕ್ತಿ ಹಾಡಲೆಂದೆ ಕೇಂದ್ರ ಸರಕಾರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ಶುದ್ಧ ಗಂಗಾ ಯೋಜನೆ ಜಾರಿಗೆ ತಂದಿದ್ದರು. ಅದರ ಪರಿಣಾಮವಾಗಿ ನದಿ ಶುದ್ಧೀಕರಣಕ್ಕೆ ನಿತ್ಯ ಹೊಸ ಹೊಸ ಕಾರ್ಯಗಳಾಗುತ್ತಿವೆ. 

ಇದೀಗ ಈ ಕಾರ್ಯಕ್ಕೆ ಚಿಕ್ಕ ಬಾಲಕನಿಂದ ಬಂದ ಪ್ರತಿಕ್ರಿಯೆ ಮೋದಿಗೆ ಮೆಚ್ಚುಗೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ