ಮಹಿಳೆಯ ಮೂಗಿನಿಂದ ಮಿದುಳು ಸೇರಿದ ಜಿರಲೆ

ಶನಿವಾರ, 4 ಫೆಬ್ರವರಿ 2017 (13:29 IST)
ಮಹಿಳೆಯೊಬ್ಬರ ಮೂಗಿನ ಮೂಲಕ ಮಿದುಳು ಭಾಗವನ್ನು ಸೇರಿದ ಜಿರಲೆಯನ್ನು ಚೆನ್ನೈನ ಸ್ಟಾನ್ಲಿ ಆಸ್ಪತ್ರೆ ವೈದ್ಯರು ಹೊರತೆಗೆದ ಅಪರೂಪದ ಘಟನೆ ನಡೆದಿದೆ. ಚೆನ್ನೈನ ಈಂಜಂಬಾಕಂನ ಗೌರಿಯಮ್ಮನ್ ಆಲಯ ಬೀದಿಯಲ್ಲಿರುವ ಮುನುಸ್ವಾಮಿ ಪತ್ನಿ ಸೆಲ್ವಿ (42) ಅವರು ಜನವರಿ 31ರ ರಾತ್ರಿ ನಿದ್ದೆ ಮಾಡುತ್ತಿರಬೇಕಾದರೆ ಮೂಗಿನಲ್ಲಿ ಜಿರಳೆ ಪ್ರವೇಶಿಸಿದೆ. 
 
ಬುಧವಾರ ಸಮೀಪದ ಆಸ್ಪತ್ರೆಗೆ ಹೋದಾಗ ಔಷಧಿ ಕೊಟ್ಟು ಕಳುಹಿಸಿದ್ದಾರೆ. ಆದರೆ ಔಷಧಿಗಳನ್ನು ಬಳಸಿದರೂ ನೋವು ಕಡಿಮೆಯಾಗದ ಕಾರಣ ಸಮೀಪದ ಮತ್ತೊಂದು ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡಿದ್ದಾರೆ. ಅಲ್ಲಿ ಸ್ಕ್ಯಾನ್ ಮಾಡಲಾಗಿ ಮಿದುಳು ಭಾಗದಲ್ಲಿ ಜಿರಲೆ ಇರುವುದು ಗೊತ್ತಾಗಿದೆ. 
 
ಸ್ಟಾನ್ಲಿ ಸರಕಾರಿ ಆಸ್ಪತ್ರೆಗೆ ದಾಖಲಾದರು. ಅಲ್ಲಿನ ಇಎನ್‌ಟಿ ವೈದ್ಯರು ಆ ಜಿರಲೆ ಇನ್ನೂ ಜೀವಂತ ಇರುವುದನ್ನು ಗುರುತಿಸಿ ಗುರುವಾರ ಹೊರತೆಗೆದಿದ್ದಾರೆ. ಜಿರಲೆ ಬರೀ ಅಡುಗೆ ಮನೆಯಲ್ಲಿರುತ್ತದೆ ಬಿಡು, ಅದರಿಂದೇನಾಗುತ್ತದೆ ಎಂಬುಕೊಂಡವರಿಗೆ ಈ ಘಟನೆ ಮೈ ಜುಂ ಎನ್ನಿಸುವಂತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ