ರಾಹುಲ್ ಹೇಳಿಕೆಗೆ ಲೇವಡಿ ಮಾಡಿದ ಮೋದಿ ವಿರುದ್ಧ ಚಿದಂಬರಂ ವಾಗ್ದಾಳಿ

ಶನಿವಾರ, 24 ಡಿಸೆಂಬರ್ 2016 (12:15 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಲೇವಡಿ ಮಾಡಿರುವುದಕ್ಕೆ ತಿರುಗೇಟು ನೀಡಿದ ಅವರು, ರಾಹುಲ್ ಕೂಡಾ ಲೇವಡಿ ಮಾಡಬಹುದಿತ್ತು. ಆದರೆ, ಅವರು ಹಾಗೇ ಮಾಡುವುದಿಲ್ಲ. ಮೊದಲು ಮೋದಿ ಲೇವಡಿ ಮಾಡುವುದು ಬಿಟ್ಟು ಅವರ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.
 
ನನ್ನನ್ನು ಲೇವಡಿ ಮಾಡಿ. ಆದರೆ ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದು ರಾಹುಲ್, ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ರಾಹುಲ್ ಪ್ರಶ್ನೆಗಳಿಗೆ ಉತ್ತರಿಸುವುದು ಮೋದಿ ಕರ್ತವ್ಯವಾಗಿದೆ. ನೋಟ್‌ಬ್ಯಾನ್‌ ವಿಫಲ ಕಾರ್ಯಕ್ರಮದಿಂದಾಗಿ ಗಾಬರಿಗೊಂಡಿರುವ ಮೋದಿ, ಹಾಸ್ಯಾಸ್ಪದ ನಟನೆಯಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ನಮಗೂ ಯಾರನ್ನು ಹೇಗೆ ಲೇವಡಿ ಮಾಡಬೇಕು ಎನ್ನುವುದು ನಮಗೂ ಗೊತ್ತಿದೆ. ನಾನು ಪ್ರಧಾನಿ ಮೋದಿಯಂತೆ ಮಾತನಾಡಬಲ್ಲೆ. ಅವರನ್ನು ಲೇವಡಿ ಮಾಡಬಲ್ಲೆ. ಆದರೆ, ಅವರು ದೇಶದ ಪ್ರಧಾನಿಯಾಗಿದ್ದರಿಂದ ನಾವು ಹಾಗೇ ಮಾಡುವುದಿಲ್ಲ ಎಂದಿದ್ದಾರೆ.  
 
ಮೋದಿ ಸರಕಾರ ನೋಟು ನಿಷೇಧ ಹೇರುವ ಮೂಲಕ ದೇಶದ ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಬಡವರು , ರೈತರು ಯಾವ ತಪ್ಪು ಮಾಡಿದ್ದಕ್ಕಾಗಿ ಸಂಕಷ್ಟ ಅನುಭವಿಸಬೇಕು? ಯಾವ ಕಾರಣಕ್ಕಾಗಿ ಎನ್ನುವುದನ್ನು ಮೋದಿಯವರಿಗೆ ಕೇಳಲು ಬಯಸುತ್ತೇವೆ ಎಂದು ಮಾಜಿ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ