ಇನ್ನು ಎಲ್ಲ ರಾಜ್ಯಗಳಿಗಿಂತ ರಾಜಸ್ಥಾನದಲ್ಲೇ ಬಾಲ್ಯ ವಿವಾಹದ ಪ್ರಮಾಣ ಹೆಚ್ಚು. ಇಲ್ಲಿ 10ರಿಂದ 20ರ ವಯಸ್ಸಿನ ಬಾಲಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿವಾಹ ಮಾಡುತ್ತಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಮಂಡಳಿ ವರದಿ ತಿಳಿಸಿದೆ. ದಾವಣಗೆರೆಯಲ್ಲಿ ಬಾಲ್ಯ ವಿವಾಹ ತುಸು ಹೆಚ್ಚಾಗಿಯೇ ಕಂಡು ಬಂದಿದ್ದರೆ, ಬಾಗಲಕೋಟೆಯಲ್ಲಿ ಹಿಂದಿಗಿಂತ ಕಡಿಮೆ ಬಾಲ್ಯವಿವಾಹ ಗಳು ವರದಿಯಾಗಿವೆ. 18 ತುಂಬುವ ಮೊದಲೇ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡುವ ಪ್ರವೃತ್ತಿ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿದೆ ಎಂದು ಈ ವರದಿ ಹೇಳಿದೆ.
2011ರ ವರದಿ ಪ್ರಕಾರ ಅತೀಹೆಚ್ಚು ಬಾಲ್ಯ ವಿವಾಹ ಇರುವ 70 ಜಿಲ್ಲೆಗಳ ಪೈಕಿ, ನಗರಗಳಲ್ಲೇ ಶೇ. 25.8 ಬಾಲ್ಯವಿವಾಹಗಳಾಗುತ್ತವೆ. ನಗರದಲ್ಲಿನ 10ರಿಂದ 17 ವರ್ಷದೊಳಗಿನ ಪ್ರತಿ ಐವರು ಬಾಲೆ ಯರಲ್ಲಿ ಒಬ್ಬರು ಮದುವೆಯಾಗುತ್ತಾರೆ ಎಂದು ಹೇಳಿದೆ. ಆದರೆ ಮಕ್ಕಳಿಗೇಕೆ ಚಿಕ್ಕವಯಸ್ಸಿನಲ್ಲೇ ಮದುವೆ ಮಾಡಲಾಗುತ್ತದೆ ಎಂಬುದನ್ನು ಮಾತ್ರ ವರದಿ ತಿಳಿಸಿಲ್ಲ.