ನವದೆಹಲಿ: ಡೋಕ್ಲಾಂ ವಿವಾದ ಮುಗಿದಿದೆ ಎನ್ನುವಾಗಲೇ ವಿವಾದಿತ ಪ್ರದೇಶದಿಂದ ಕೆಲವೇ ಕಿ.ಮೀ.ಗಳ ದೂರದಲ್ಲಿ ಚೀನಾ ರಸ್ತೆ ಅಗಲೀಕರಣ ಮಾಡಿರುವುದು ಕೇಂದ್ರದ ಮೇಲೆ ವಿಪಕ್ಷಗಳು ಟೀಕೆ ಮಾಡುವಂತಾಗಿತ್ತು.
ಆದರೆ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ವಿದೇಶಾಂಗ ಇಲಾಖೆ ಡೋಕ್ಲಾಂ ರಸ್ತೆ ನಿರ್ಮಾಣ ವಿಚಾರದಲ್ಲಿ ಚೀನಾ ಗಡಿ ಒಪ್ಪಂದ ಉಲ್ಲಂಘಿಸಿಲ್ಲ ಎಂದಿದೆ. ಚೀನಾ ನಿಯಮ ಉಲ್ಲಂಘಿಸಿದೆ ಎಂಬ ಸುದ್ದಿಗಳು ಸುಳ್ಳು ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ಹೊರಹಾಕಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ಚೀನಾ ರಸ್ತೆ ನಿರ್ಮಿಸುತ್ತಿದ್ದರೆ ನೀವು ಏನು ಮಾಡುತ್ತಿದ್ದೀರಿ ಎಂದು ಪ್ರಧಾನಿ ಮೋದಿಯನ್ನು ಕುಟುಕಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ