ಭಾರತದ ಗಡಿಯೊಳಕ್ಕೆ ನುಗ್ಗಿದ ಚೀನೀ ಸೈನಿಕರು

ಮಂಗಳವಾರ, 27 ಜೂನ್ 2017 (08:40 IST)
ಸಿಕ್ಕಿಂ: ಒಂದೆಡೆ ಪಾಕಿಸ್ತಾನ, ಇನ್ನೊಂದೆಡೆ ಚೀನಾ ಇನ್ನಿಲ್ಲದಂತೆ ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕಿ ಕುಳಿತಿದೆ. ಚೀನೀ ಪಡೆ ಸಿಕ್ಕಿಂ ಗಡಿ ಮೂಲಕ ಭಾರತದ ಗಡಿಯೊಳಕ್ಕೆ ನುಗ್ಗುವ ಪ್ರಯತ್ನ ನಡೆಸಿದ್ದು, ಭಾರತೀಯ ಸೈನಿಕರ ಬಂಕರ್ ಹೊಡೆದುರುಳಿಸಿದೆ ಎಂದು ವರದಿಯಾಗಿದೆ.

 
ಕಳೆದ ಒಂದು ವಾರದ ಅವಧಿಯಲ್ಲಿ ಚೀನಾ ಪಡೆಗಳು ಎರಡು ಬಂಕರ್ ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಇಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಿಕ್ಕಿಂ ಗಡಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ಆದರೆ ಅತ್ತ ಚೀನಾ ಭಾರತವೇ ಗಡಿ ಉಲ್ಲಂಘಿಸಿ ತಮ್ಮ ಜನರು ನಿರ್ಮಿಸುತ್ತಿದ್ದ ರಸ್ತೆಗೆ ತಡೆ ನೀಡಲು ಪ್ರಯತ್ನ ನಡೆಸಿತ್ತು. ಇದಕ್ಕೆ ತಮ್ಮ ಪಡೆ ಉತ್ತರಿಸಿದೆಯಷ್ಟೇ ಎಂದು ಹೇಳಿಕೊಂಡಿದೆ. ಗಡಿ ದಾಟಲು ಯತ್ನಿಸುತ್ತಿದ್ದ ಚೀನಾ ಸೈನಿಕರನ್ನು ತಡೆಯುವ ನಿಟ್ಟಿನಲ್ಲಿ ಉಭಯ ಸೈನಿಕರ ನಡುವೆ ತಳ್ಳಾಟ, ನೂಕಾಟ ನಡೆದಿದೆ. ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ