ಚೀನಾದ ಆ್ಯಪ್‌ಗಳು ಬ್ಯಾನ್!

ಸೋಮವಾರ, 14 ಫೆಬ್ರವರಿ 2022 (14:49 IST)
ನವದೆಹಲಿ : ಭಾರತದ ಭದ್ರತೆಗೆ ಅಪಾಯವನ್ನುಂಟು ಮಾಡುವ ಚೀನಾದ ಆ್ಯಪ್ಗಳನ್ನು ನಿಷೇಧಿಸಲು ಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಸ್ವೀಟ್ ಸೆಲ್ಫಿ ಎಚ್ಡಿ, ಬ್ಯೂಟಿ ಕ್ಯಾಮೆರಾ – ಸೆಲ್ಫಿ ಕ್ಯಾಮೆರಾ, ವಿವಾ ವೀಡಿಯೋ ಎಡಿಟರ್, ಟೆನ್ಸೆಂಟ್ ಎಕ್ಸ್ರಿವರ್, ಒನ್ಮಿಯೋಜಿ ಅರೆನಾ, ಆಪ್ಲಾಕ್, ಡುಯೆಲ್ ಸ್ಪೇಸ್ ಲೈಟ್ ಸೇರಿದಂತೆ ಅನೇಕ ಆ್ಯಪ್ಗಳನ್ನು ನಿಷೇಧಿಸಲಾಗುವುದು ಎಂದು ಹೇಳಿವೆ. 

ಕಳೆದ ವರ್ಷದ ಜೂನ್ನಲ್ಲೂ ಸಹ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದ ಚೀನಾದ ಟಿಕ್ಟಾಕ್, ವಿಚಾಟ್, ಹೆಲೋ ಸಿಟಿಂಗ್ 59 ಅಪ್ಲಿಕೇಷನ್ಗಳನ್ನು ನಿಷೇಧಿಸಲಾಗಿತ್ತು. ಮಾಜಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಈ ಅಪ್ಲಿಕೇಶನ್ಗಳನ್ನು ನಿಷೇಧಿಸಲಾಗಿತ್ತು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ