ಚೀನಾ ಹೆಲಿಕಾಪ್ಟರ್ ನಿಂದ ಭಾರತದ ವಾಯುಗಡಿ ಉಲ್ಲಂಘನೆ

ಭಾನುವಾರ, 4 ಜೂನ್ 2017 (12:31 IST)
ಡೆಹರಾಡೂನ್:ಚೀನಾ ಭಾರತದ ವಾಯುಗಡಿ ಉಲ್ಲಂಘನೆ ಮಾಡಿದ್ದು, ಉತ್ತರಾಖಂಡ್ ನ ಚಿಮೋಲಿ ಜಿಲ್ಲೆಯಲ್ಲಿ ಚೀನಾ ಹೆಲಿಕಾಫ್ಟರ್ ಗಳು ವಾಯುಗಡಿ ಉಲ್ಲಂಘನೆ ಮಾಡಿದೆ.
 
ಜೂ.3 ರಂದು ಬೆಳಿಗ್ಗೆ ಚಿಮೋಲಿಯಲ್ಲಿ ಚೀನಾದ ಹೆಲಿಕಾಫ್ಟರ್ ಗಳ ಹಾರಾಟ ಕಂಡುಬಂದಿದ್ದು, ಚಿಮೋಲಿಯ ಎಸ್ ಪಿ ತ್ರಿಪಾಟಿ ಭಟ್ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 3-5 ನಿಮಿಷಗಳ ಕಾಲ ಚೀನಾ ಹೆಲಿಕಾಪ್ಟರ್ ಭಾರತದ ವಾಯುಗಡಿಯನ್ನು ಉಲ್ಲಂಘನೆ ಮಾಡಿ ಹಾರಾಟ ನಡೆಸಿದೆ ಎಂದು ಹೇಳಿದ್ದಾರೆ.
 
ಚೀನಾದ ಹೆಲಿಕಾಫ್ಟರ್ ಗಳು ಉದ್ದೇಶಪೂರ್ವಕವಾಗಿ ಅಥವಾ ಅನುದ್ದೇಶಿತವಾಗಿ ವಾಯುಗಡಿ ಉಲ್ಲಂಘಿಸಿರಬಹುದು ಏನೇ ಇದ್ದರೂ ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ