ಸಲ್ಮಾನ್ ಬೆನ್ನು ಬಿದ್ದ ಬೇತಾಳ...

ಬುಧವಾರ, 19 ಅಕ್ಟೋಬರ್ 2016 (09:32 IST)

ಜೈಪುರ: ಕೃಷ್ಣಮೃಗಗಳ ಬೇಟೆ ಪ್ರಕರಣಗಳಲ್ಲಿ ಹಿಂದಿ ಚಿತ್ರನಟ ಸಲ್ಮಾನ್ ಖಾನ್ ಅವರ ಖುಲಾಸೆಯನ್ನು ಪ್ರಶ್ನಿಸಿ ರಾಜಸ್ತಾನ ಸರಕಾರ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದೆ.
 

ನ್ಯಾಯಾಲಯದಿಂದಲೇ ರಿಲೀಫ್ ದೊರೆತರೂ ಬಿಟ್ಟು ಬಿಡದ ಬೇತಾಳದಂತೆ ಬೇಟೆ ಪ್ರಕರಣ ಸಲ್ಮಾನ್ ಖಾನ್ ಅವರನ್ನು ಬೆನ್ನು ಬಿದ್ದಿದೆ. ಸಲ್ಮಾನ್ ನಿರ್ದೋಷಿ ಎಂದು ನ್ಯಾಯಾಲಯ ಕೃಷ್ಣ ಮೃಗಗಳ ಬೇಟೆ ಪ್ರಕರಣ ಕೈ ಬಿಟ್ಟಿತ್ತು. ರಾಜಾಸ್ತಾನ ಸರಕಾರ ಆತ ದೋಷಿಯೆಂದು ಸಾಬೀತು ಪಡಿಸಲು ಮತ್ತೆ ಮೇಲ್ಮನವಿ ಸಲ್ಲಿಸುವ ನಿರ್ಧಾರದ ಮೂಲಕ ಸಲ್ಮಾನ್ ರನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ.
 

 

ಸರಕಾರವು ದಾಖಲೆಗಳನ್ನು ಅಧ್ಯಯನ ಮಾಡುತ್ತಿದ್ದು, ಪ್ರಕರಣದ ಮಹತ್ವದ ಸಂಗತಿಗಳು ಮತ್ತು ಲೋಪದೋಷಗಳನ್ನು ಗುರುತಿಸುತ್ತಿದೆ. ಸಲ್ಮಾನ್ ಅವರನ್ನು ಖುಲಾಸೆ ಮಾಡಿದ ತೀರ್ಪಿನ ವಿರುದ್ಧ ಸುಪ್ರಿಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ರಾಜಸ್ತಾನ ಕಾನೂನು ಸಚಿವ ರಾಜೇಂದ್ರ ರಾಥೋರ್ ಮಾಧ್ಯಮಕ್ಕೆ ತಿಳಿಸಿದ್ದಾರೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ