ಆಂಧ್ರಪ್ರದೇಶ: ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕರಿಸಿದ ಚಂದ್ರಬಾಬು ನಾಯ್ಡು ಮಾಡಿರುವ ಆದೇಶವೊಂದು ಎಲ್ಲಾ ಸಿಎಂಗಳಿಗೂ ಮಾದರಿಯಾಗಬೇಕು. ಅಂತಹ ಘೋಷಣೆ ಏನು ಮಾಡಿದ್ದಾರೆ ಇಲ್ಲಿ ನೋಡಿ.
ಸಾಮಾನ್ಯವಾಗಿ ಸಿಎಂ ಲೆವೆಲ್ ನ ವಿಐಪಿಗಳು ಓಡಾಡುವಾಗ ಝೀರೋ ಟ್ರಾಫಿಕ್ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತದೆ ಎಂಬ ಆರೋಪಗಳಿವೆ. ಇದೀಗ ಚಂದ್ರಬಾಬು ನಾಯ್ಡು ತಾವು ಓಡಾಡುವಾಗ ಯಾವುದೇ ಕಾರಣಕ್ಕೂ ಬೇರೆ ವಾಹನಗಳನ್ನು ತಡೆದು ರಸ್ತೆ ಖಾಲಿ ಮಾಡಿಸಿ ತೊಂದರೆ ಕೊಡಬಾರದು ಎಂದು ಆದೇಶಿಸಿದ್ದಾರೆ.
ತಮ್ಮ ವಾಹನ ಸಂಚರಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆ ಖಾಲಿ ಮಾಡಿಸಬಾರದು. ನಮಗೆ ತುರ್ತಾಗಿ ತೆರಳಬೇಕೆಂದು ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವುದು ನಮ್ಮ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಸಚಿವರ ಬೆಂಗಾವಲು ತೆರಳುವ ವೇಳೆಯೂ ಪೊಲೀಸರು ಸಾರ್ವಜನಿಕರ ವಾಹನ ತಡೆದು ತೊಂದರೆ ನೀಡುತ್ತಾರೆ. ಇದರಿಂದ ಎಷ್ಟೋ ಜನ ತುರ್ತಾಗಿ ತೆರಳುವವರಿಗೆ ತೊಂದರೆಯಾಗುತ್ತದೆ. ವಿಐಪಿಗಳಿಗೆ ಹಿಡಿಶಾಪ ಹಾಕುತ್ತಾರೆ. ಇನ್ನು ಮುಂದೆ ಆಂಧ್ರದಲ್ಲಿ ಇಂತಹ ಪದ್ಧತಿಗೆ ತಿಲಾಂಜಲಿ ಇಡಲಾಗಿದೆ.