ನಿರ್ಮಾಣ ಹಂತದ ವೈಎಸ್‌ಆರ್‌ಸಿಪಿ ಕೇಂದ್ರ ಕಚೇರಿ ಧ್ವಂಸ: ಜಗನ್ ಮೋಹನ್‌ ಆಕ್ರೋಶ

Sampriya

ಶನಿವಾರ, 22 ಜೂನ್ 2024 (14:15 IST)
Photo Courtesy X
ಹೈದರಾಬಾದ್: ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ರಾಜ್ಯ ಸರ್ಕಾರ ನಿರ್ಮಾಣ ಹಂತದಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಕೇಂದ್ರ ಕಚೇರಿಯನ್ನು ಧ್ವಂಸಗೊಳಿಸಿದೆ ಎಂದು ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಶನಿವಾರ ಹೇಳಿದ್ದಾರೆ.

ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಕಚೇರಿಯನ್ನು ನೆಲಸಮಗೊಳಿಸಲಾಗಿದೆ ಎಂದು  ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ.

ಚಂದ್ರಬಾಬು ನಾಯ್ಡು ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಬಹುತೇಕ ಪೂರ್ಣಗೊಂಡಿದ್ದ ವೈಎಸ್‌ಆರ್‌ಸಿಪಿ ಕೇಂದ್ರ ಕಚೇರಿಯನ್ನು ಸರ್ವಾಧಿಕಾರಿಯಂತೆ ಯಂತ್ರಗಳು ಮತ್ತು ಬುಲ್ಡೋಜರ್‌ಗಳಿಂದ ವೈಎಸ್‌ಆರ್‌ಸಿಪಿಯ ಕೇಂದ್ರ ಕಚೇರಿಯನ್ನು ಕೆಡವಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಜಗನ್ ಫೋಸ್ಟ್ ಮಾಡಿದ್ದಾರೆ.

ಸಿಆರ್‌ಡಿಎ (ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ) ದ ಕ್ರಮಗಳನ್ನು ಪ್ರಶ್ನಿಸಿ ವೈಎಸ್‌ಆರ್‌ಸಿಪಿ ಶುಕ್ರವಾರ ಹೈಕೋರ್ಟ್‌ಗೆ ಮೊರೆ ಹೋಗಿ್ತು. ಯಾವುದೇ ಧ್ವಂಸ ಕಾರ್ಯಾಚರಣೆ ನಡೆಯದಂತೆ ಕೋರ್ಟ್ ಆದೇಶ ನೀಡಿತ್ತು.ಆದರೆ, ಪ್ರಾಧಿಕಾರ ಹಿಂದೆ ಸರಿದಿದ್ದು, ಕಟ್ಟಡವನ್ನು ಧ್ವಂಸಗೊಳಿಸಿದೆ ಎಂದು ವೈಎಸ್‌ಆರ್ ಸಿಪಿ ಹೇಳಿದೆ.

ಶನಿವಾರ ಮುಂಜಾನೆ 5.30ರ ಸುಮಾರಿಗೆ ಧ್ವಂಸ ಕಾರ್ಯಾಚರಣೆ ಪ್ರಾರಂಭವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ