ಕೇಜ್ರಿ ಸರ್ಕಾರದಿಂದ ದೆಹಲಿಯ ಆಟೋ, ಟ್ಯಾಕ್ಸಿ ಚಾಲಕರಿಗೆ 5000 ರೂ. ಕೊಡುಗೆ

ಬುಧವಾರ, 5 ಮೇ 2021 (09:39 IST)
ನವದೆಹಲಿ: ಕೊರೋನಾ ಪ್ರಕರಣಗಳು ಮಿತಿ ಮೀರಿರುವ ಹಿನ್ನಲೆಯಲ್ಲಿ ದೆಹಲಿಯಲ್ಲೂ ಲಾಕ್ ಡೌನ್ ವಿಸ್ತರಿಸಲಾಗಿದೆ. ಆದರೆ ಈ ವೇಳೆ ತೊಂದರೆಗೊಳಗಾಗಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಸಿಎಂ ಕೇಜ್ರಿವಾಲ್ ಬಂಪರ್ ಕೊಡುಗೆ ಘೋಷಿಸಿದ್ದಾರೆ.


ಚಾಲಕರಿಗೆ ಎರಡು ತಿಂಗಳು 5000 ರೂ. ಸರ್ಕಾರ ಪಾವತಿಸಲಿದೆ. ಅಲ್ಲದೆ, ರೇಷನ್ ಕಾರ್ಡ್ ಹೊಂದಿದ ಎಲ್ಲರಿಗೂ ಮುಂದಿನ ಎರಡು ತಿಂಗಳು ಉಚಿತ ರೇಷನ್ ನೀಡುವುದಾಗಿ ಘೋಷಿಸಿದ್ದಾರೆ.

ಈ ಕಠಿಣ ಪರಿಸ್ಥಿತಿಯಲ್ಲಿ ಈ ವರ್ಗದವರಿಗೆ ದುಡಿಮೆಯಿಲ್ಲದೇ ಕಷ್ಟವಾಗಿದೆ. ಹೀಗಾಗಿ ಅಂತಹವರಿಗೆ ಸರ್ಕಾರದಿಂದ ನೆರವು ನೀಡಲಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಸುಮಾರು 1,56,000 ಆಟೋ ಚಾಲಕರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ