ಶಂಕಿತರಾಗಿ ಹೋಗಿ ಸೋಂಕಿತರಾಗಿ ಬರುತ್ತಿರುವ ಜನ!
ಸರ್ಕಾರಿ ಲ್ಯಾಬ್ ಗಳಲ್ಲಿ, ಬಿಬಿಎಂಪಿ ಕಚೇರಿಗಳಲ್ಲಿ ಕೊರೋನಾ ಉಚಿತ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇದನ್ನು ಪಡೆಯಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಇದರಿಂದಾಗಿ ಹಲವರು ಸೋಂಕು ಇಲ್ಲದೇ ಇದ್ದರೂ ತಗುಲಿಸಿಕೊಂಡು ಬರುವ ಪರಿಸ್ಥಿತಿಯಾಗಿದೆ. ಆದಷ್ಟು ಜನನಿಬಿಡ ಪ್ರದೇಶಗಳಲ್ಲಿ ಸೇರಬಾರದು, ಗುಂಪು ಸೇರಬಾರದು ಎಂದು ಸರ್ಕಾರವೇ ನಿಯಮ ರೂಪಿಸಿದರೂ ಅನಿವಾರ್ಯವಾಗಿ ಜನರು ಕೊರೋನಾ ಪರೀಕ್ಷೆಗಾಗಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬಂದು ಅಪಾಯಕ್ಕೆ ಸಿಲುಕಿಕೊಳ್ಳುತ್ತಿರುವುದು ವಿಪರ್ಯಾಸ.