ಸಿಎಂ ಕೇಜ್ರಿವಾಲ್ ಪಕ್ಕ ಕೂತಿರುವ ಈ ಮಹಿಳೆ ಯಾರು ಗೊತ್ತಾ?!
ಪ್ರಭಾ ಮುನ್ನಿ ಜತೆ ಅರವಿಂದ್ ಕೇಜ್ರಿವಾಲ್ ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೇಜ್ರಿವಾಲ್ ಜತೆಗೆ ಈಕೆಗೆ ನಿಕಟ ಸಂಪರ್ಕವಿತ್ತೇ ಎಂಬಿತ್ಯಾದಿ ಚರ್ಚೆಗಳು ಆರಂಭವಾಗಿದೆ.
ಪಂಜಾಬ್ ನಲ್ಲಿ ಮೊನ್ನೆಯಷ್ಟೇ ಈಕೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು. ಇದಾದ ಒಂದೇ ದಿನದ ಬಳಿಕ ಈ ಫೋಟೋ ಬಹಿರಂಗವಾಗಿದ್ದು ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಎನ್ ಜಿಒ ನಡೆಸುವ ನೆಪ ಹೂಡಿ ಈಕೆ ಒಳಗೊಳಗೆ ಅಕ್ರಮ ಚಟುವಟಿಕೆ ನಡೆಸುತ್ತಿದ್ದಳು ಎಂದು ಆರೋಪಿಸಲಾಗಿದೆ.