ನನ್ನನ್ನು ರಕ್ಷಿಸಲಾಗದಿದ್ದರೆ ಪ್ರಧಾನಿ ಹುದ್ದೆ ತ್ಯಜಿಸಲಿ: ಸಿಎಂ ಕೇಜ್ರಿವಾಲ್ ಆಕ್ರೋಶ
ದೆಹಲಿ ಸಿಎಂ ಕೇಜ್ರಿವಾಲ್ ನಿವಾಸದ ಬಳಿ ಸಜೀವ ಮದ್ದು ಗುಂಡು ಹೊಂದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಅವರ ಭದ್ರತೆ ಬಗ್ಗೆ ಕಳವಳ ಮೂಡಿಸಿದೆ.
ಇದರ ಬೆನ್ನಲ್ಲೇ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ‘ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ 12 ವರ್ಷ ಏನು ಮಾಡಿದ್ದರೋ, ಅದರ ದುಪ್ಪಟ್ಟು ಎಎಪಿ ಸರ್ಕಾರ ದೆಹಲಿಯಲ್ಲಿ ಮಾಡಿದೆ.ದೆಹಲಿಯ ಮುಖ್ಯಮಂತ್ರಿಗೆ ಸರಿಯಾಗಿ ಭದ್ರತೆ ಕೊಡಲಾಗದಿದ್ದರೆ ಪ್ರಧಾನಿ ಹುದ್ದೆ ತ್ಯಜಿಸಲಿ’ ಎಂದು ಕಿಡಿ ಕಾರಿದ್ದಾರೆ.