ತಮ್ಮ ತಾಯಿ ಬಗ್ಗೆ ಆವಹೇಳನ ಮಾಡಿದ ಕಾಂಗ್ರೆಸ್ ನಾಯಕನಿಗೆ ಪ್ರಧಾನಿ ಮೋದಿ ಕೊಟ್ಟ ತಿರುಗೇಟು ಏನು ಗೊತ್ತಾ?
ಮಾತನಾಡಲು ಬೇರೆ ವಿಷಯವಿಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದು ಪ್ರಧಾನಿ ಮೋದಿ ಕಿಡಿ ಕಾರಿದ್ದಾರೆ. ರಾಜ್ ಬಬ್ಬರ್ ಕಾರ್ಯಕ್ರಮವೊಂದರಲ್ಲಿ ಮೋದಿಯವರ ತಾಯಿಯ ವಯಸ್ಸಿನಂತೆ ರೂಪಾಯಿ ಮೌಲ್ಯವೂ ದಿನೇ ದಿನೇ ಪತನದತ್ತ ಸಾಗುತ್ತಿದೆ ಎಂದಿದ್ದರು.
ಇದಕ್ಕೆ ಮಧ್ಯಪ್ರದೇಶದ ಚುನಾವಣಾ ರ್ಯಾಲಿಯೊಂದರಲ್ಲಿ ತಿರುಗೇಟು ಕೊಟ್ಟಿರುವ ಪ್ರಧಾನಿ ಮೋದಿ ‘ಮಾತನಾಡಲು ಬೇರೆ ವಿಷಯ ಸಿಕ್ಕದಾಗ ಇನ್ನೊಬ್ಬರ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ’ ಎಂದಿದ್ದಾರೆ.