ಈ ಬಗ್ಗೆ ಸಭೆಯೊಂದರಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಿಂದ ವಲಸೆ ಬಂದು ಪಶ್ಚಿಮ ಬಂಗಾಳದಲ್ಲಿ ನೆಲೆಸಿ, ಮತದಾನ ಮಾಡಿರುವ ಎಲ್ಲರೂ ಭಾರತೀಯ ಪ್ರಜೆಗಳಾದ ಕಾರಣ ಅವರು ಪೌರತ್ವಕ್ಕೆ ಅರ್ಜಿ ಹಾಕುವ ಅವಶ್ಯಕತೆ ಇಲ್ಲ . ನೀವುಗಳು ಹಲವಾರು ವರ್ಷಗಳಿಂದ ಇಲ್ಲಿ ಮತದಾನ ಮಾಡುತ್ತಾ ಬಂದಿದ್ದೀರಾ. ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುತ್ತಿದ್ದೀರಾ. ಅವರು ಈಗ ನೀವು ಭಾರತೀಯರಲ್ಲ ಎಂದು ಹೇಳುತ್ತಿದ್ದಾರೆ. ಅವರನ್ನು ನಂಬಬೇಡಿ.
ನಾನು ಒಬ್ಬ ವ್ಯಕ್ತಿಯನ್ನು ಕೂಡ ಬಂಗಾಳದಿಂದ ಹೊರ ಹಾಕಲು ಬಿಡುವುದಿಲ್ಲ, ರಾಜ್ಯದಲ್ಲಿರುವ ನಿರಾಶ್ರಿತರನ್ನು ಪೌರತ್ವ ವಂಚಿತರಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.