ಭ್ರಷ್ಟ ಲಾಲೂ ಯಾದವ್ ಪುತ್ರನನ್ನು ಪದಚ್ಯುತಗೊಳಿಸಲು ನಿತೀಶ್ ಸಜ್ಜು
ಇತ್ತೀಚೆಗಷ್ಟೇ ನಿತೀಶ್ ತೇಜಸ್ವಿ ಯಾದವ್ ತಾವಾಗಿಯೇ ರಾಜೀನಾಮೆ ನೀಡಲು ಗಡುವು ವಿಧಿಸಿದ್ದರು. ಆದರೆ ಇದಕ್ಕೆ ತೇಜಸ್ವಿ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಅವರನ್ನು ಪದಚ್ಯುತಗೊಳಿಸಲು ಸಿಎಂ ನಿತೀಶ್ ಚಿಂತನೆ ನಡೆಸಿದ್ದಾರೆ. ಇದು ಬಿಹಾರ ಮೈತ್ರಿ ಸರ್ಕಾರದ ಮೇಲೆ ಮತ್ತಷ್ಟು ಹೊಡೆತ ಬೀಳಬಹುದು.