ವಯನಾಡು ಭೂಕುಸಿತದ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಸಿಎಂ ಪಿಣರಾಯಿ

Sampriya

ಮಂಗಳವಾರ, 30 ಜುಲೈ 2024 (19:15 IST)
ಕೇರಳ: ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ 93ಕ್ಕೆ ಏರಿಯಾಗಿದ್ದು, 3069ಮಂದಿಯನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಂತರಿಸಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.

ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಕುಸಿತದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಜುಲೈ 30 ರ ಬುಧವಾರ ಎರಡು ಬಾರಿ ವಯಾನಾಡಿನಲ್ಲಿ ರಾಜ್ಯ ಕಂಡರಿಯದ ನೈಸರ್ಗಿಕ ವಿಕೋಪ ಸಂಭವಿಸಿದೆ.  ಭೂಕುಸಿತದಿಂದಾಗಿ ಅವಶೇಷಗಳಡಿ ಸಿಲುಕಿದ್ದ 93 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇದರಲ್ಲಿ 34 ಜನರು ಗುರುತು ಪತ್ತೆಯಾಗಿದ್ದು, 18 ಶವಗಳ ಮರಣೋತ್ತರ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ಎಂದರು.

ಮುಂಜಾನೆ 2 ಗಂಟೆಗೆ ಸಂಭವಿಸಿದ ಮೊದಲ ಭೂಕುಸಿತ ಹಾಗೂ 4.10 ಕ್ಕೆ ಎರಡನೇ ಭೂಕುಸಿತ ಸಂಭವಿಸಿದೆ. ಮೆಪ್ಪಾಡಿ, ಮುಂಡಕ್ಕೈ, ಚೂರಲ್‌ಮಲ ಪ್ರದೇಶಗಳು ಜಲಾವೃತವಾಗಿದ್ದು, ಚಿರಕುಮಲ ಮತ್ತು ಮುಂಡಕೈ ನಡುವಿನ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ಇರುವಝಿಂಜಿಪ್ಪುಳ ಎರಡು ಭಾಗವಾಯಿತು. ಹಾಗೂ ವೆಲ್ಲರ್ಮಳ ಸರಕಾರಿ ಶಾಲೆ ಮಣ್ಣಿನಡಿಯಲ್ಲಿ ಹೂತು ಹೋಗಿದೆ.

'ಇದು ನಮ್ಮ ರಾಜ್ಯವು ಕಂಡ ಅತ್ಯಂತ ದುರಂತ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ. ಸಾಧ್ಯವಿರುವ ಎಲ್ಲ ಮಾರ್ಗಗಳ ಮೂಲಕ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ,'' ಎಂದರು.

ವಯನಾಡಿನ 45 ರಕ್ಷಣಾ ಶಿಬಿರಗಳಲ್ಲಿ 3,069 ಜನರನ್ನು ಸ್ಥಳಾಂತರಿಸಲಾಗಿದ್ದು, ರಾಜ್ಯಾದ್ಯಂತ 5531 ಜನರು 118 ಶಿಬಿರಗಳಲ್ಲಿ ತಂಗಿದ್ದಾರೆ. ಅವರಿಗೆ ಆಹಾರ ಮತ್ತಿತರ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ