ಕಂಚಿನ ಪದಕ ಗೆದ್ದ ಸರಬ್ಜೋತ್ ಸಿಂಗ್‌ಗೆ ಮೋದಿಯಿಂದ ಶುಭಾಶಯ
ಸರಬ್ಜೋತ್ ಸಿಂಗ್ ಮತ್ತು ಸಹ ಶೂಟರ್ ಮನು ಭಾಕರ್ ಅವರು ನಡೆಯುತ್ತಿರುವ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಕಂಚಿನ ಪದಕವನ್ನು ಗೆದ್ದಿದ್ದಾರೆ. 22ರ ಹರೆಯದ ಇಬ್ಬರು ಆಟಗಾರರು ದಕ್ಷಿಣ ಕೊರಿಯಾದ ಲೀ ವೊನೊಹೊ ಮತ್ತು ಓಹ್ ಯೆ ಜಿನ್ ಅವರನ್ನು 16-10 ಅಂತರದಿಂದ ಚಟೌರೊಕ್ಸ್‌ನ ಶೂಟಿಂಗ್ ರೇಂಜ್‌ನಲ್ಲಿ ಸೋಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಭಾನುವಾರ ಇದೇ ಸ್ಥಳದಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಕರ್ ಕಂಚಿನ ಪದಕ ಗೆದ್ದಿದ್ದರು.