ರಾಹುಲ್ ಗಾಂಧಿ ಭೇಟಿಯಾದ ಸಿಎಂ ಸಿದ್ದರಾಮಯ್ಯ

ಶನಿವಾರ, 15 ಏಪ್ರಿಲ್ 2017 (12:02 IST)
ಉಪಚುನಾವಣೆಯ ಗೆಲುವಿನ ಬಳಿಕ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ದಿಲ್ಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿದೆ. ದೆಹಲಿಯ ತುಘಲಕ್ ಲೇನ್`ನಲ್ಲಿರುವ ರಾಹುಲ್ ಗಾಂಧಿ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಸಿಎಂಗೆ ಕೆಪಿಸಿಸಿ ಅಧ್ಯಕ್ಷ  ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಾಥ್ ನೀಡಿದ್ದಾರೆ.

ವಿಧಾನಪರಿಷತ್`ಗೆ 3 ಸ್ಥಾನಗಳ ನಾಮ ನಿರ್ದೇಶನ ಸ್ತಾನಗಳು ಮತ್ತು 2 ಸಚಿವ ಸ್ಥಾನಗಳ ಕುರಿತಂತೆಯೂ ಚರ್ಚೆ ನಡೆದಿದೆ. ಗುಂಡ್ಲುಪೇಟೆಯಲ್ಲಿ ಭರ್ಜರಿ ಜಯ ಗಳಿಸಿದ ದಿವಂಗತ ಮಾಜಿ ಸಚಿವ ೆಚ್.ಎಸ್. ಮಹದೇವ ಪ್ರಸಾದ್ ಪತ್ನಿ ಗೀತಾ ಮಹದೇವ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಸಚಿವ ಸ್ಥಾನಕ್ಕೆ ಶಿವಳ್ಳಿ, ಸಿ.ಎಸ್. ಗೋವಿಂದಪ್ಪ ಮತ್ತು ಎಸ್.ಆರ್ ಪಾಟೀಲ್, ಅಪ್ಪಾಜಿ ಸಿಎಸ್ ನಾಡಗೌಡ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಇತ್ತ, ಪರಿಷತ್ ನಾಮನಿರ್ಧೆಶನಕ್ಕೂ ಲಾಬಿ ಜೋರಾಗಿದ್ದು, ಮುಖ್ಯಮಂತ್ರಿ ಚಂದ್ರು, ಸಿಎಂ ಲಿಂಗಪ್ಪ, ಮೋಹನ್ ಕೊಂಡಜ್ಜಿ, ಕೆ.ಜಿ. ನಂಜುಂಡಿ ಪರಿಷತ್ ಸ್ಥಾನದ ಾಕಾಂಕ್ಷಿಗಳೆಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ