ಸಿಎಂ ಯೋಗಿ, ಗೃಹ ಸಚಿವ ಅಮಿತ್ ಶಾಗೆ ಜೀವ ಬೆದರಿಕೆ

ಮಂಗಳವಾರ, 6 ಏಪ್ರಿಲ್ 2021 (10:03 IST)
ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಈ ಮೇಲ್ ಮೂಲಕ ಜೀವ ಬೆದರಿಕೆಯೊಂದು ಬಂದಿದೆ.


ಮುಂಬೈನ ಸಿಆರ್ ಪಿಎಫ್ ಕಚೇರಿಗೆ ಮಂಗಳವಾರ ಬೆಳಿಗ್ಗೆ ಜೀವ ಬೆದರಿಕೆ ಪತ್ರ ಬಂದಿದೆ. ಕೇವಲ ಈ ಇಬ್ಬರು ಗಣ್ಯರಿಗೆ ಮಾತ್ರವಲ್ಲದೆ, ಕೆಲವು ಪ್ರಮುಖ ದೇವಾಲಯ, ಪ್ರಾರ್ಥನಾ ಮಂದಿರಗಳಲ್ಲೂ ಸ್ಪೋಟ ನಡೆಸುವುದಾಗಿ ಅನಾಮಿಕ ಪತ್ರವೊಂದು ಬಂದಿದೆ.

ಆತ್ಮಾಹುತಿ ದಾಳಿ ನಡೆಸಿ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಯೋಗಿ ಆದಿತ್ಯನಾಥ್ ರ ಕತೆ ಮುಗಿಸುವುದಾಗಿ ಈ-ಮೇಲ್ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಲಿದ್ದಾರೆ. ಜೊತೆಗೆ ಇಬ್ಬರಿಗೂ ಭದ್ರತೆ ಹೆಚ್ಚಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ