ಸಿಎಂ ಯೋಗಿ ಸರ್ಕಾರದಿಂದ ಮತ್ತೊಂದು ವಿವಾದಾತ್ಮಕ ನಿರ್ಧಾರ
ಇನ್ನು ಮುಂದೆ ಯಾವುದೇ ಶಾಸಕರು, ಸಚಿವರು, ಸಂಸದರು ಬಂದಾಗ ಸರ್ಕಾರಿ ಅಧಿಕಾರಿಗಳು ತಮ್ಮ ಆಸನದಿಂದ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಹೊಸ ಆದೇಶ ಹೊರಡಿಸಲಾಗಿದೆ. ಒಂದೆಡೆ ಪ್ರಧಾನಿ ಮೋದಿ ವಿಐಪಿ ಸಂಸ್ಕೃತಿ ನಿಲ್ಲಿಸಬೇಕೆಂದು ಕರೆಕೊಡುತ್ತಿದ್ದರೆ, ಇತ್ತ ಯೋಗಿ ಸರ್ಕಾರ ಇಂತಹದ್ದೊಂದು ಆದೇಶ ನೀಡಿರುವುದು ಮತ್ತೆ ವಿವಾದವಾಗುವ ಎಲ್ಲಾ ಲಕ್ಷಣಗಳಿವೆ.