ಉತ್ತರ ಪ್ರದೇಶದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಬಸ್

ಸೋಮವಾರ, 24 ಜುಲೈ 2017 (09:39 IST)
ಲಕ್ನೋ: ಮಹಿಳೆಯರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಎಂ ಯೋಗಿ ಸರ್ಕಾರ ಹೊಸ ಕ್ರಮವೊಂದನ್ನು ಕೈಗೊಂಡಿದೆ.


ಮಹಿಳೆಯರಿಗೆಂದೇ ‘ಪಿಂಕ್ ಬಸ್’ ಆರಂಭಿಸುತ್ತಿದೆ. ಅದೂ ಅಂತಿಂಥ ಬಸ್ ಅಲ್ಲ. ಹವಾನಿಯಂತ್ರಿತ ಬಸ್ ಪ್ರಾರಂಭಿಸಲಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ತನ್ನ ‘ನಿರ್ಭಯಾ ಫಂಡ್’ ನಿಂದ 50 ಬಸ್ ಗಳನ್ನು ನೀಡಲಿದೆ.

ಈ ಬಸ್ ನಲ್ಲಿ ಕಂಡಕ್ಟರ್, ಡ್ರೈವರ್ ಎಲ್ಲರೂ ಮಹಿಳೆಯರೇ ಆಗಿರುತ್ತಾರೆ ಎಂದು ಸರ್ಕಾರ ಹೇಳಿದೆ. ಈಗಾಗಲೇ ಸಿಎಂ ಯೋಗಿ ಸರ್ಕಾರ ಅಲ್ಲಿನ ಸರ್ಕಾರಿ ಬಸ್ ಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನೂ ಜೋಡಿಸಿದೆ. ಈ ವಿಶೇಷ ಬಸ್ ನಲ್ಲಿಯೂ ಆ ಎಲ್ಲಾ ಸೌಲಭ್ಯಗಳಿರಲಿವೆ.

ಇದನ್ನೂ ಓದಿ..  ಪಂದ್ಯ ಸೋತರೂ ಹೃದಯ ಗೆದ್ದ ಭಾರತ ಮಹಿಳೆಯರು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ