ನೋಟು ನಿಷೇಧ ಜಾರಿ ಕುರಿತಂತೆ ಶ್ವೇತಪತ್ರ ಹೊರಡಿಸಲು ಕಾಂಗ್ರೆಸ್ ಒತ್ತಾಯ

ಗುರುವಾರ, 29 ಡಿಸೆಂಬರ್ 2016 (15:23 IST)
ದೇಶದ ಸಾಮಾನ್ಯ ಜನತೆಯನ್ನು ಸಂಕಷ್ಟಕ್ಕೆ ದೂಡಿದ ಕೇಂದ್ರ ಸರಕಾರದ ನೋಟು ನಿಷೇಧ ಜಾರಿ ಕುರಿತಂತೆ ಶ್ವೇತಪತ್ರ ಹೊರಡಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. 
 
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಐದು ಪ್ರಶ್ನೆಗಳನ್ನು ಮೋದಿ ಸರಕಾರದ ಮುಂದಿಟ್ಟಿದ್ದು, ನೋಟು ನಿಷೇಧದ ಹಿಂದಿರುವ ರಹಸ್ಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಕೂಡಾ ಬ್ಯಾಂಕ್‌ಗಳಿಂದ ಹಣ ಹಿಂಪಡೆಯುವ ನಿರ್ಭಂಧನೆಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.
 
ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಮುಂಬರುವ ಜನೆವರಿ 11 ರಂದು ನಡೆಯಲಿದ್ದು, ಪಕ್ಷದ ಸಂಸದರು ಮತ್ತು ಹಿರಿಯ ನಾಯಕರು ನೋಟು ನಿಷೇಧ ಕುರಿತಂತೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. 
 
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮನೇರ್ಗಾ ಕಾರ್ಮಿಕರ ವೇತನವನ್ನು ದ್ವಿಗುಣಗೊಳಿಸಬೇಕು, ವಹಿವಾಟುದಾರರಿಗೆ ಶೇ.50 ರಷ್ಟು ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆಯನ್ನು ಕಡಿತಗೊಳಿಸಬೇಕು ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ