ಧರ್ಮಸ್ಥಳದಲ್ಲಿ ಇಂದು ಯಾವ ಪಾಯಿಂಟ್ ನಲ್ಲಿ ಎಸ್ಐಟಿ ಶೋಧ ನಡೆಸಲಿದೆ
ನಿನ್ನೆ ದಿನವಿಡೀ 6 ನೇ ಪಾಯಿಂಟ್ ನಲ್ಲಿ ಎಸ್ಐಟಿ ತಂಡ ಶೋಧ ಕಾರ್ಯ ನಡೆಸಿದೆ. ಈ ವೇಳೆ ಕೆಲವು ಮೂಳೆಗಳು ಪತ್ತೆಯಾಗಿವೆ. ಮೂಲಗಳ ಪ್ರಕಾರ ಇದು ಓರ್ವ ಪುರುಷನ ಮೃತದೇಹದ ಅವಶೇಷಗಳು ಎನ್ನಲಾಗಿದೆ. ಈ ಅಸ್ಥಿಪಂಜರವನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ.
ಇಂದೂ ಕೂಡಾ ಎಸ್ಐಟಿ ತಂಡ ಇಲ್ಲಿಯೇ ಶೋಧ ಕಾರ್ಯ ಮುಂದುವರಿಸಲಿದೆ ಎನ್ನಲಾಗಿದೆ. ನಿನ್ನೆಯೇ ಅಜ್ಞಾತ ದೂರುದಾರ ಇಲ್ಲಿಯೇ ಮತ್ತಷ್ಟು ಶೋಧ ನಡೆಸಲು ಹೇಳಿದ್ದ. ಹೀಗಾಗಿ ಪೊಲೀಸರು ಈ ಸ್ಥಳಕ್ಕೆ ನೀರು ನುಗ್ಗಿ ಹಾನಿಯಾಗದಂತೆ ತಡೆಗೋಡೆ ಮಾಡಿದ್ದಾರೆ. ಇಂದೂ ಇಲ್ಲಿಯೇ ಶೋಧ ಕಾರ್ಯ ಮುಂದುವರಿಯಲಿದೆ.
ಇಂದಿನ ಕಾರ್ಯಾಚರಣೆಗೆ ಮುನ್ನ ಎಸ್ಐಟಿ ತಂಡ ಸಭೆ ನಡೆಸಿದೆ. ಇಂದಿನ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸಿದೆ. ಹೀಗಾಗಿಯೇ ಇಲ್ಲಿ ಇನ್ನಷ್ಟು ಶೋಧ ನಡೆಸಿ ಮುಂದಿನ ಪಾಯಿಂಟ್ ಗೆ ಹೋಗುವ ಸಾಧ್ಯತೆಯಿದೆ.